ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ 108 ಶಾಶ್ವತ ಮೆಟ್ಟಿಲು ನಿರ್ಮಾಣಕ್ಕೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೇಣಿಗೆ ನೀಡುವ ಮೂಲಕ ಶಿಲನ್ಯಾಸ ನೆರವೇರಿಸಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/malnadtimes/videos/720836440429060/
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಿಯ ದರ್ಶನಕ್ಕೆ ಭಕ್ತರು ಮೆಟ್ಟಿಲ ಮೇಲೆ ನಡೆದು ಬರುವಾಗ ಸಂಸದರ ಹೆಸರು ನೆನಪು ಮಾಡಿಕೊಳ್ಳುತ್ತಾ ನಮಗೆ ಸದಾ ಆಶೀರ್ವಾದ ಮಾಡಲಿ ಎಂಬ ಉದ್ದೇಶದಿಂದ ನಮ್ಮ ಮಾತೃಶ್ರೀಯವರ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ದೇಣಿಗೆ ನೀಡುತ್ತಿರುವುದಾಗಿ ಭಕ್ತರ ಸಮ್ಮುಖದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್‌ರಿಗೆ ಸಮರ್ಪಿಸಿದರು.

ಹಿರಿಯರಾದ ಬಿ.ಸ್ವಾಮಿರಾವ್ ಇವರು ಕಳೆದ ಮೂರು ವರ್ಷದ ಹಿಂದೆ ಅಮ್ಮನಘಟ್ಟ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ದೇವಿಯ ಸನ್ನಿಧಿಯಲ್ಲಿ ಸಂಕಲ್ಪಿಸಿದಂತೆ ಇಂದು ಶಿಲಾಮಯ ದೇವಸ್ಥಾನ ಸುಸಜ್ಜಿತ ಕಟ್ಟಡ ನಿರ್ಮಾಣದೊಂದಿಗೆ ಲೋಕಾರ್ಪಣೆಯಾಗುತ್ತಿದ್ದು ಮುಂದೊಂದು ದಿನ ಈ ಕ್ಷೇತ್ರ ಪ್ರವಾಸಿ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಸರ್ಕಾರದಿಂದ ಈ ಹಿಂದೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಮೂಲಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ಕಾರಣ ಬಿಡುಗಡೆಯಾದ ಅನುದಾನವನ್ನು ನೀಡುವಲ್ಲಿ ವಿಳಂಬ ಧೋರಣೆ ತಾಳಿದೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ಆ ಅನುದಾನ ದೇವಸ್ಥಾನ ಅಭಿವೃದ್ದಿ ಕಾರ್ಯಕ್ಕೆ ಸಮರ್ಪಕವಾಗಿ ಸದ್ಬಳಕೆಯಾಗಲೆಂದರು.
ಶಿಲನ್ಯಾಸ ಸಮಾರಂಭದ ಅಧ್ಯಕ್ಷತೆಯನ್ನು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಬಿ.ಸ್ವಾಮಿರಾವ್ ವಹಿಸಿದ್ದರು.

ಭಾವುಕರಾದ ಬಿ.ಸ್ವಾಮಿರಾವ್ !
ಪುರಾಣ ಪ್ರಸಿದ್ದ ಶ್ರೀ ಅಮ್ಮನಘಟ್ಟ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ದಿಪಡಿಸುವ ಮಹಾದಾಸೆ ಹೊಂದಿದ್ದು ಆದರೆ ಸರ್ಕಾರ ಹಣವನ್ನು ಇಂದಿನ ಸರ್ಕಾರ ತಡೆಹಿಡಿದರೂ ಕೂಡಾ ಧೈರ್ಯವಾಗಿ ಭಕ್ತರ ನೆರವಿನೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ದಿಯೊಂದಿಗೆ ಶಿಲಾಮಯ ಕಟ್ಟಡವನ್ನು ನಿರ್ಮಿಸಲು ಸಹಕರಿಸಿದ ಭಕ್ತರ ಮತ್ತು ಸಂಸದರ ಸಹಕಾರವನ್ನು ಸ್ಮರಿಸಿ ಭಾವುಕರಾದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಶ್ರಮಿಸಿದ ಹಿರಿಯ ಚೇತನಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಸನ್ಮಾನಿಸಿ ಅಭಿನಂದಿಸಿದರು.

ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶ, ವ್ಯವಸ್ಥಾಪನಾ ಸಮಿತಿಯ ಪುಟ್ಟಪ್ಪ, ದೇವರಾಜ, ಹರೀಶ್, ಶ್ರೀನಿವಾಸ ಹಿಂಡ್ಲೆಮನೆ, ರತ್ನಮ್ಮ, ಸುಧೀರ್‌ಭಟ್, ಕೋಡೂರು ವಿಜೇಂದ್ರರಾವ್ ಹಾಗೂ ಹೊಸನಗರ ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮತ್ತಿಮನೆ ಕೆ.ವಿ.ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಸುರೇಶ ಸ್ವಾಮಿರಾವ್, ಬಿ.ಎಸ್. ಪುರುಷೋತ್ತಮ್‌ರಾವ್ ಬಿದರಹಳ್ಳಿ, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ ಆಲವಳ್ಳಿ, ಮುಖಂಡರಾದ ಎ.ವಿ.ಮಲ್ಲಿಕಾರ್ಜುನ, ಬಿ.ಯುವರಾಜ್, ಹಾಲಗದ್ದೆ ಉಮೇಶ್, ರಾಮಚಂದ್ರ ಹರತಾಳು, ಲೇಖನ ಚಂದ್ರನಾಯ್ಕ್, ತೀರ್ಥೇಶ್ ಕಲ್ಯಾಣಪ್ಪಗೌಡ, ಮಂಡಾನಿ ಮೋಹನ್, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.