ಪ್ರಯಾಣಿಕರ ಗಮನಕ್ಕೆ : ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಸಂಚಾರ ಸಮಯದಲ್ಲಿ ದೊಡ್ಡ ಬದಲಾವಣೆ !

Written by Koushik G K

Published on:

ಶಿವಮೊಗ್ಗ – ಹಾಸನ ಮತ್ತು ಕೋರವಂಗಲ ನಡುವೆ ನಡೆಯುವ ಸುರಕ್ಷತಾ ಹಾಗೂ ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಆಗಸ್ಟ್ 18, 19, 21, 22, 23, 25, 26, 28 ಮತ್ತು 29, 2025 ರಂದು ರೈಲು ಸಂಖ್ಯೆ 16222 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಮಾರ್ಗದಲ್ಲಿ 30 ನಿಮಿಷಗಳ ಕಾಲ ಸಂಚಾರ ನಿಯಂತ್ರಣ ಜಾರಿಯಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಳಗುಪ್ಪ–ಯಶವಂತಪುರ ವಿಶೇಷ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ

ಪ್ರಯಾಣಿಕರ ಸೌಕರ್ಯಕ್ಕಾಗಿ, ನೈಋತ್ಯ ರೈಲ್ವೆ ರೈಲು ಸಂಖ್ಯೆ 06544 ತಾಳಗುಪ್ಪ–ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಹೊರಡುವ ವೇಳೆಯನ್ನು 14 ಆಗಸ್ಟ್ 2025 ರಂದು ಪರಿಷ್ಕರಿಸಿದೆ.

ಹಿಂದಿನ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 8:15ಕ್ಕೆ ತಾಳಗುಪ್ಪದಿಂದ ಹೊರಡಬೇಕಿದ್ದ ರೈಲು, ಈಗ ಬೆಳಿಗ್ಗೆ 10:00 ಗಂಟೆಗೆ ಹೊರಡಲಿದೆ. ಪರಿಷ್ಕೃತ ಆಗಮನ/ನಿರ್ಗಮನ ಸಮಯಗಳು ಈ ಕೆಳಗಿನಂತಿವೆ –

  • ಸಾಗರ ಜಂಬಗಾರು: 10:16 / 10:18
  • ಆನಂದಪುರಂ: 10:48 / 10:50
  • ಶಿವಮೊಗ್ಗ ಟೌನ್: 11:55 / 12:00
  • ಭದ್ರಾವತಿ: 12:20 / 12:22
  • ತರಿಕೆರೆ: 12:38 / 12:40
  • ಬೀರೂರು: 13:10 / 13:12
  • ಅರಸೀಕೆರೆ: 14:00 / 14:05
  • ತಿಪಟೂರು: 14:25 / 14:27
  • ತುಮಕೂರು: 15:43 / 15:45
  • ಯಶವಂತಪುರ: 17:15ಕ್ಕೆ ತಲುಪುತ್ತದೆ.

ರೈಲ್ವೆ ಇಲಾಖೆ, ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗಳನ್ನು ಪರಿಷ್ಕೃತ ವೇಳಾಪಟ್ಟಿಗೆ ಅನುಗುಣವಾಗಿ ಮಾಡಿಕೊಂಡುಕೊಳ್ಳುವಂತೆ ವಿನಂತಿಸಿದೆ.

Leave a Comment