ನಾಗರ ವಿಗ್ರಹ ಧ್ವಂಸ: ಶಿವಮೊಗ್ಗದಲ್ಲಿ ಶಾಂತತೆ ಕಾಪಾಡಲು ಪೊಲೀಸರು ಕಠಿಣ ಕ್ರಮ

Written by Koushik G K

Published on:

ಶಿವಮೊಗ್ಗ:ನಗರದ ರಾಗಿಗುಡ್ಡ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಜುಲೈ 4) ಸಂಜೆ ಸಂಭವಿಸಿದ ನಾಗರ ವಿಗ್ರಹ ಧ್ವಂಸ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆ ಮೊಹರಂ ಹಿನ್ನೆಲೆಯಲ್ಲಿ ಸಂಭವಿಸಿದ್ದು ಎಂದು ಪ್ರಾರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಊಹಾಪೋಹಗಳಿಗೆ ಕಾರಣವಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಘಟನೆಯಾದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಿದ್ದು, ಸಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಅನೇಕ ಸಂದೇಶಗಳು ಹರಿದಾಡುತ್ತಿದ್ದವು.

ಆರೋಪಿ ಅರೆಸ್ಟ್: ಪೊಲೀಸರ ಸ್ಪಷ್ಟನೆ

ಈ ಎಲ್ಲ ಗೊಂದಲಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಈಗ ಸ್ಪಷ್ಟನೆ ನೀಡಿದ್ದು, ವಿಗ್ರಹವನ್ನು ಧ್ವಂಸಗೊಳಿಸಿದ ಆರೋಪಿ ಸೈಯದ್ ಎಂಬ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಆತನ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.ಘಟನೆಯಲ್ಲಿ ಇಬ್ಬರ ಬಂಧನವಾಗಿದೆ .

ಎಸ್‌ಪಿ ಅವರ ಪ್ರಕಾರ, “ಈ ಘಟನೆಯು ಸಂಪೂರ್ಣವಾಗಿ ವ್ಯಕ್ತಿಗತ ಕೃತ್ಯವಾಗಿದ್ದು, ಧಾರ್ಮಿಕ ಅಥವಾ ಸಂಘಟಿತ ಉದ್ದೇಶವಿಲ್ಲ. ಸಾರ್ವಜನಿಕರು ಶಾಂತತೆ ಕಾಪಾಡಿ ಸಹಕಾರ ನೀಡಬೇಕು,” ಎಂದು ಮನವಿ ಮಾಡಿದ್ದಾರೆ.

ಸುದ್ದಿಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ

ಘಟನೆಯ ಸ್ಥಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅನಾವಶ್ಯಕ ಗೊಂದಲವನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ನಗರದಲ್ಲಿ ಶಾಂತಿಯುತ ವಾತಾವರಣ ಕಾಪಾಡುವಲ್ಲಿ ಪೊಲೀಸರು ಎಚ್ಚರಿಕೆಯಿಂದ ಇರುತ್ತಿದ್ದಾರೆ.

ಸೊರಬದಲ್ಲಿ ಆಡಳಿತ ವೈಫಲ್ಯ, ಅಭಿವೃದ್ಧಿಗೆ ಧಕ್ಕೆ: ಕುಮಾರ್ ಬಂಗಾರಪ್ಪ ವಾಗ್ದಾಳಿ

Leave a Comment