ನಾಗರಹಳ್ಳಿ ನಾಗೇಂದ್ರಸ್ವಾಮಿ ವರ್ಧಂತ್ಯುತ್ಸವ ಮತ್ತು ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ

Written by malnadtimes.com

Published on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ  ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿಯ 14ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ ಧಾರ್ಮಿಕ ಕಾರ್ಯಕ್ರಮವು ವೇ.ವಿದ್ವಾನ್ ಹಂಸಗಾರ ಭಾಸ್ಕರ್‌ಶರ್ಮ ಇವರ ಪುರೋಹಿತ ಬಳಗದವರಿಂದ ಪೂಜಾ ಕೈಂಕರ್ಯಗಳು ಯಶಸ್ವಿಯಾಗಿ ನೆರವೇರಿದವು.

WhatsApp Group Join Now
Telegram Group Join Now
Instagram Group Join Now

ಇದೇ ಸಂದರ್ಭದಲ್ಲಿ ನಾಗರಹಳ್ಳಿ ದೇವಸ್ಥಾನದ ಹತ್ತಿರ ಮಹಾದ್ವಾರ ಕಲಶಸ್ಥಾಪನೆ ಮತ್ತು ದೇವಸ್ಥಾನದಲ್ಲಿ ಕ್ಷೇತ್ರಪಾಲನ ಪ್ರತಿಷ್ಟಾಪನೆ ಹಾಗೂ ದೇವಸ್ಥಾನದ ಅವರಣದಲ್ಲಿ ಇಂಟರ್‌ಲಾಕ್ ಅಳವಡಿಕೆ  ಹೀಗೆ ವಿವಿಧ ಆಭಿವೃದ್ದಿಗಳ ಲೋಕಾರ್ಪಣೆಯು ಜರುಗಿತು.

ನಂತರ ಧಾರ್ಮಿಕ ಸಭೆಯಲ್ಲಿ ವೇ.ವಿದ್ವಾನ್ ಭಾಸ್ಕರ್‌ಶರ್ಮ ಆಶೀರ್ವಚನ ನೀಡಿ 12ನೇ ಶತಮಾನದಲ್ಲಿ ತಮ್ಮ 5ನೇ ವರ್ಷದಲ್ಲಿ ಜಗದ್ಗುರು ಶಂಕರಾಚಾರ್ಯರು ವೇದ ಉಪನಿಷತು ಆಧ್ಯಯನ ನಡೆಸಿ ಧರ್ಮ ಪ್ರಸಾರದೊಂದಿಗೆ ಧರ್ಮಸಂಸ್ಥಾಪಕರಾಗಿ ಈಶ್ವರನ ರೂಪ ಹೊಂದಿದವರಾದರು.

ಮಹಾದ್ವಾರ ನಿರ್ಮಿಣಕ್ಕೆ ಕೊಡುಗೆ ನೀಡಿದ ದಾನಿ ರವಿ ಹಾಗೂ ಕ್ಷೇತ್ರಪಾಲನ ಸೇವಾಕರ್ತರಾದ ಕಾರಕ್ಕಿಯ ಗಣೇಶ ಮತ್ತು ಮನೆಯವರು ಮತ್ತು ದೇವಸ್ಥಾನದ ಆವರಣದಲ್ಲಿ ಇಂಟರ್ ಲಾಕ್ ಸೇವಾಕರ್ತದ ಕಾಗೆಮರಡು ಮಂಜಣ್ಣ ಮತ್ತು ಕುಟುಂಬದವರನ್ನು ದೇವಸ್ಥಾನ ಸೇವಾ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.

ನಾಗರಹಳ್ಳಿ ದೇವಸ್ಥಾನ ಸೇವಾ ಸಮಿತಿಯವರು ಮತ್ತು ದೇವಸ್ಥಾನದ ಪ್ರಧಾನ ಅರ್ಚಕರು ಗ್ರಾಮಸ್ಥರು ಸುತ್ತಮುತ್ತಲಿನ ಭಕ್ತ ಸಮೂಹ ಪಾಲ್ಗೊಂಡಿದ್ದರು.

ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

Leave a Comment