ಯಾವುದೇ ಸಹಕಾರಿ ಸಂಸ್ಥೆಯ ಮೇಲೆ ಸವಾರಿ ಸಲ್ಲ ; ವಕೀಲ ಹೆಚ್.ಪಿ. ನಂಜುಡಪ್ಪ

Written by Mahesha Hindlemane

Published on:

ಹೊಸನಗರ ; ಇಂದಿನ ದಿನದಲ್ಲಿ ಸಹಕಾರಿ ಕ್ಷೇತ್ರವು ವ್ಯಾಪಾರಿಕರಣ, ರಾಜಕೀಯ, ಹಣ ಮತ್ತು ಅಧಿಕಾರಕ್ಕಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿ ಉಳ್ಳವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಲೆನಾಡು ಅಡಿಕೆ ಮತ್ತು ತೋಟಗಾರಿಕ ಬೆಳೆಗಳ ಖರೀದಿ ಹಾಗೂ ಪರಿಷ್ಕರಣ ಘಟಕದ ಅಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ಹೆಚ್.ಪಿ ನಂಜುಂಡಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಜೆಸಿಎಂ ರಸ್ತೆಯಲ್ಲಿರುವ ಮಲೆನಾಡು ಅಡಿಕೆ ಪರಿಷ್ಕರಣೆ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಕೊಡಚಾದ್ರಿ ಅಡಿಕೆ ಮಂಡಿಯ ಅವ್ಯವಹಾರ ನಡೆದಿದೆ ಎಂದು ಹೇಳಿರುವವರ ವಿರುದ್ಧವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಸುಮಾರು 20 ವರ್ಷಗಳಿಂದ ಅಡಿಕೆ ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿದ್ದು ಅಡಿಕೆ ಬೆಳೆಗಾರರ ಕಷ್ಟ ಏನೂ ಎಂಬುದು ಬಲ್ಲವನಾಗಿದ್ದೇನೆ. ನಾವು ಬಡತನದಲ್ಲಿಯೇ ಬಂದವರಾಗಿದ್ದು ಯಾವುದೇ ಸಹಕಾರಿ ಸಂಸ್ಥೆಯ ಮೇಲೆ ಸವಾರಿ ಮಾಡುವುದು ಸರಿಯಲ್ಲ.

ಹೊಸನಗರ ತಾಲ್ಲೂಕಿನಲ್ಲಿ ಉತ್ತಮವಾಗಿ ಹಾಗೂ ಸದಸ್ಯರ ಅನುಕೂಲಕ್ಕಾಗಿ ತೆರೆದಿರುವ ಕೊಡಚಾದ್ರಿ ಅಡಿಕೆ ಸಹಕಾರಿ ಸೌಹಾರ್ದ ಸಹಕಾರಿ ಸಂಘವನ್ನು ಉದಾಹರಣೆ ನೀಡಿ ಮಾತನಾಡಿ, ಉತ್ತಮವಾಗಿ ನಡೆಯುತ್ತಿರುವ ಸಹಕಾರಿ ಸಂಘದ ಬಗ್ಗೆ ಅಡಿಕೆ ಸಹಕಾರಿ ಸಂಘದವರೇ ಅಪಪ್ರಚಾರ ಮಾಡುತ್ತಿದ್ದಾರೆ?ಕೊಡಚಾದ್ರಿ ಅಡಿಕೆ ಮಂಡಿ ನಡೆಸುತ್ತಿರುವ ಅಧ್ಯಕ್ಷರಾದ ಹೆಚ್.ಎಂ ರಾಘವೇಂದ್ರ ಅತ್ಯಂತ ಪ್ರಾಮಾಣಿಕ ಸಹಕಾರಿಯಾಗಿ ಈತನನ್ನು ಬಾಲ್ಯದಿಂದಲ್ಲೂ ನಾವು, ನೀವೆಲ್ಲರೂ ನೋಡಿರುವವರು. ಇವರು ಆರ್.ಎಸ್.ಎಸ್ ಮೂಲದಿಂದ ಬಂದವರು ಆರ್‌ಎಸ್‌ಎಸ್‌ನಲ್ಲಿ ಪ್ರಮುಖರು ಆಗಿದ್ದು ಪ್ರಾಮಾಣಿಕ ವ್ಯಕ್ತಿವುಳ್ಳ ಇವರನ್ನು ಗುರುತಿಸಿ ಸಹಕಾರಿ ಸಂಸ್ಥೆಗಳು ಇವರ ಆಡಳಿತವನ್ನು ಮೆಚ್ಚಿ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅಂತರಾಜ್ಯ ಮಟ್ಟದ ಕ್ಯಾಂಪ್ಕೋ ಸಂಸ್ಥೆಯವರು 2ನೇ ಬಾರಿಗೆ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಹೀಗಿದ್ದೂ ಇವರ ಮುಂದಾಳತ್ವದಲ್ಲಿ ಕೊಡಚಾದ್ರಿ ಸಂಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತಿದ್ದು ಈ ಸಂಸ್ಥೆಯ ವಿರುದ್ಧ ಹಾಗೂ ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಇವರು ಮಾಡುವ ಅಪಪ್ರಚಾರದಿಂದ ಪಟ್ಟಭದ್ರ ಹಿತಾಸಕ್ತಿಗಳು ಅಡಿಕೆ ಗ್ರಾಹಕ ಸದಸ್ಯರನ್ನು ತಮ್ಮ ಮಂಡಿಗೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿದ್ದು ಇದು ಯಾರಿಗೂ ಶೋಭೆ ತರತಕ್ಕದ್ದಲ್ಲ ಎಂದರು.

ಎಲ್ಲಾ ಲಿಂಗಾಯಿತರು ಶ್ರೀಮಂತರಲ್ಲ ;

ಹಿಂದೆ ಆಡು ಭಾಷೆಯಾಗಿ ಹಿಂದುಳಿದ ಶೋಷಿಕ ವರ್ಗದ ಜನಾಂಗದವರನ್ನು ಬೈದಾಡುವ ಸಂದರ್ಭದಲ್ಲಿ ಲಿಂಗಾಯಿತರ ಮನೆ ಸಗಣಿ ತಟ್ಟು ಎಂದು ಹೇಳುವ ವಾಡಿಕೆಯಿದೆ. ಆದರೆ ಹಿಂದೆಯೂ ಅಲ್ಪ ಪ್ರಮಾಣದಲ್ಲಿ ಲಿಂಗಾಯಿತ ಪಂಗಡದವರು ಶ್ರೀಮಂತರು ಬಹುಪಾಲು ಲಿಂಗಾಯಿತರಲ್ಲಿ ಬಡವರು ಇದ್ದರು. ಒಂದಿಬ್ಬರು ಲಿಂಗಾಯಿತರು ಮಾಡುವ ತಪ್ಪಿಗೆ ಎಲ್ಲ ಲಿಂಗಾಯಿತರು ಶೋಷಿತ ವರ್ಗದವರನ್ನು ಈ ರೀತಿ ನಡೆದುಕೊಳ್ಳುತ್ತಾರೆ ಎಂಬುದು ತಪ್ಪು ಎಂದು ಅದೇ ರೀತಿ ವಿರೋಧಿಗಳು ಹಿಂದಿನ ಕಾಲದಿದ್ದಲೂ ಕೆಲವು ಲಿಂಗಾಯಿತರು ಹಿಂದುಳಿದವರನ್ನು ದಬ್ಬಾಳಿಕೆ ಮಾಡುತ್ತಾ ಅವರನ್ನು ಪೋಷಿಸುತ್ತಾ ಎಲ್ಲ ಜಾತಿಯ ಬಡವರನ್ನು ಜೀತಕ್ಕೆ ಬಳಕೆ ಮಾಡುತ್ತಾ ಬಂದಿದ್ದು ಈಗಲೂ ಎಲ್ಲರನ್ನು ತುಳಿದು ಇವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದನ್ನು ಎಲ್ಲ ವರ್ಗದ ಜನರು ಎಲ್ಲಾ ಜಾತಿ ಧರ್ಮದ ಜನರು ಅರಿತುಕೊಂಡು ಖಂಡಿಸದಿದ್ದರೆ ಹಿಂದಿನ ಕಾಲದ ಶ್ರಿಮಂತರ ದುರಾಡಳಿತ ದಬ್ಬಾಳಿಕೆಯು ಮರುಕಳಿಸುವ ಸ್ಥಿತಿಗೆ ಹೋಗುತ್ತದೆ. ಇಂತಹ ಇನ್ನೊಬ್ಬರನ್ನು ತುಳಿದು ಮೇಲೆ ಬರುವ ದುಬ್ಬಾಳಿಕೆ, ದುರಾಡಳಿತ ಮಾಡುವ ಕೆಲವೇ ವ್ಯಕ್ತಿಗಳನ್ನು ಸಮಾಜದಿಂದ ಹೊರಗಿಡಲು ಎಲ್ಲ ಪೋಷಕರ ಪರವಾಗಿ ಸಾರ್ವಜನಿಕರ ಪರವಾಗಿ ನಾವು ನಿಲ್ಲುತ್ತೇವೆ. ಸಹಕಾರಿ ಸಂಸ್ಥೆಯ ಏಳಿಗೆಗೆ ನಾವು ಸಹಕರಿಸುತ್ತೇವೆ. ಎಲ್ಲ ಸಹಕಾರಿಗಳು ಒಂದಾಗಿ ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಟ ನಡೆಸೋಣ ಎಂದರು.

Leave a Comment