ಹೊಸನಗರ ; ಓ.ಸಿ. ದಂಧೆಯಲ್ಲಿ ತೊಡಗಿದ್ದ ಓರ್ವ ಪೊಲೀಸರ ವಶಕ್ಕೆ !

Written by Mahesha Hindlemane

Published on:

HOSANAGARA ; ತಾಲ್ಲೂಕಿನ ಬಟ್ಟೆಮಲ್ಲಪ್ಪ ಆಲಗೇರಿಮಂಡ್ರಿ ಗ್ರಾಮಗಳಲ್ಲಿ ಓ.ಸಿ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸನಗರ ಪೊಲೀಸರು ಮಂಜುನಾಥ ಎಂಬುವನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್‌ರವರ ಆದೇಶದ ಮೇರೆಗೆ ಸಿಬ್ಬಂದಿಯಾದ ಮಾಯಪ್ಪರವರು ಬಟ್ಟೆಮಲ್ಲಪ್ಪದ ಆನಂದಪುರ ರಸ್ತೆಯಲ್ಲಿರುವ ಅಂಗಡಿಯ ಮುಂಭಾಗ ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಚೀಟಿಯನ್ನು ಬರೆದುಕೊಡುತ್ತಿದ್ದ ಮಂಜುನಾಥ ಎಂಬುವವರು ಓ.ಸಿ ಬರೆದುಕೊಳ್ಳುತ್ತಿದ್ದು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಈತನನ್ನು ವಶಕ್ಕೆ ಪಡೆದು ಅವನ ಕೈಯಲ್ಲಿದ್ದ 1450 ರೂಪಾಯಿ ನಗದು ಓ.ಸಿ ಸಂಖ್ಯೆ ಬರೆದ ಚೀಟಿ ಮತ್ತು ಒಂದು ಪೆನ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment