HOSANAGARA ; ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ) ಇವರ ಸುವರ್ಣ ಸಂಭಮ ಆಚರಣೆಯ ಹಿನ್ನಲೆ ಇದೇ 2025ರ ಜನವರಿ 18 ಮತ್ತು 19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿನ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆಯುವ ‘ವಿಶ್ವಾಮಿತ್ರ’ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ತಾಲೂಕಿನ ವಿಪ್ರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ, ತಾಲೂಕು ಬ್ರಾಹ್ಮಣ ಮಹಾ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಎನ್. ಸ್ವರೂಪ್ ಕೋರಿದ್ದಾರೆ.
ಜನವರಿ 18ರ ಬೆಳಗ್ಗೆ 7ಕ್ಕೆ ಧ್ವಜಾರೋಹಣ, 8ಕ್ಕೆ ಲಕ್ಷ ಗಾಯತ್ರಿ ಹೋಮ, ಪೂರ್ಣಾಹುತಿ ಮತ್ತು ಸಮ್ಮೇಳನದ ಉದ್ಘಾಟನೆಯು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧು ಶೇಖರ ಭಾರತೀ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಅವರಿಂದ ಸೇವಾಕರ್ತರಿಗೆ ಗೌರವ ಸಮರ್ಪಣೆ, ಆಶೀರ್ವಚನ ನಡೆಯಲಿದೆ.
ಕರುನಾಡಿನ ಅನೇಕ ಮಠಾಧೀಶ್ವರ ದಿವ್ಯ ಉಪಸ್ಥಿತಿಯಲ್ಲಿ ಸಮ್ಮೇಳನ ಜರುಗಲಿದ್ದು, ಅನೇಕ ವಿಚಾರ ಗೋಷ್ಠಗಳು, ವಿಪ್ರ ಸಾಧಕರಿಗೆ ಸನ್ಮಾನ, ಧರ್ಮಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಜಾಗೃತಿ ಮೂಡಿಸುವ ಸಮಾಜದ ಸಮ್ಮೇಳನದಲ್ಲಿ ತಾಲೂಕಿನ ಬ್ರಾಹ್ಮಣ ಮಹಾಸಭಾದ ಕುಟುಂಬ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳದ ಯಶಸ್ವಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.