ಹೊಂಬುಜ ಜಾತ್ರಾ ಮಹೋತ್ಸವಕ್ಕೆ ತೆರೆ | ರಥೋತ್ಸವ ಆಸ್ತಿಕ ಭಕ್ತಿಯ ಸಂಕೇತ ; ಶ್ರೀಗಳು

Written by malnadtimes.com

Published on:

ರಿಪ್ಪನ್‌ಪೇಟೆ ; ಪೂರ್ವ ಪರಂಪರೆಯಂತೆ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ವಿಶ್ವವಂದ್ಯ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಧ್ವಜಾವರೋಹಣ ಮಾಡುವ ವಿದ್ಯುಕ್ತವಾಗಿ ಆರು ದಿವಸಗಳ ಆಗಮೋಕ್ತ ವಿಧಿ-ವಿಧಾನ, ಉತ್ಸವ, ಶ್ರೀಬಲಿ, ಆರಾಧೆನಗಳೆಲ್ಲವೂ ಸಾಂಗವಾಗಿ ಸಂಪನ್ನಗೊಂಡಿತು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪ್ರತಿಯೊಂದು ಪೂಜಾ ಕಾರ್ಯಗಳು ಭಕ್ತರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.

ಇಂದು ಬೆಳಿಗ್ಗೆ ನಿತ್ಯವಿಧಿ, ಪೂಜಾ ಕಾರ್ಯಗಳ ಬಳಿಕ ಕುಂಕುಮೋತ್ಸವವು ನಡೆಯಿತು. ಕುಮಧ್ವತಿ ತೀರ್ಥದಲ್ಲಿ ದೇವರ ಜಲಾಭಿಷೇಕದ ಬಳಿಕ ಗಜವಾಹನದಲ್ಲಿ ಮಹಾತಾಯಿ ಶ್ರೀ ಪದ್ಮಾವತಿ ದೇವಿ ಬಿಂಬವನ್ನು ಶ್ರೀಕ್ಷೇತ್ರದ ಜಿನಮಂದಿರಕ್ಕೆ ವಾದ್ಯಗೋಷ್ಠಿಗಳಿಂದ ತರಲಾಯಿತು. ಊರ ಭಕ್ತರು ಹಣ್ಣುಕಾಯಿ ಕಾಣಿಕೆ ಸಮರ್ಪಿಸಿದರು.

ಜಿನಮಂದಿರದಲ್ಲಿ ಅಷ್ಟವಧಾನದ ನಂತರ ಧ್ವಜಾರೋಗಣ ನಡೆದು, ಶ್ರೀ ಪದ್ಮಾವತಿ ದೇವಿ ಮೂರ್ತಿಯನ್ನು ಶ್ರೀ ಪದ್ಮಾವತಿ ಮಂದಿರಕ್ಕೆ ವಿಧಿ ಪ್ರಕಾರ ತರಲಾಯಿತು.

ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಸಂಘದ ಮುನಿಶ್ರೀಗಳವರು, ಆರ್ಯಿಕೆಯರು, ವಾರ್ಷಿಕ ರಥೋತ್ಸವದಲ್ಲಿ ಉಪಸ್ಥಿತರಿದ್ದರು.

ರಥೋತ್ಸವವು ಭಕ್ತರಲ್ಲಿ ಆಸ್ತಿಕಭಾವ ಉಂಟಾಗಲು ಪ್ರೇರಣೆದಾಯಕ ಮಾತ್ರವಲ್ಲ ಸರ್ವಸಂಕಷ್ಟ ಪರಿಹಾರಕ್ಕೆ ದೇವರಲ್ಲಿ ನಂಬಿಕೆ ಇರುತ್ತದೆ ಎಂದು ಪೂಜ್ಯಶ್ರೀಗಳವರು ತಿಳಿಸಿದರು.

ಸೊಂದಾ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು.

ಉತ್ಸವಗಳಲ್ಲಿ ಗಜರಾಣಿ ಐಶ್ವರ್ಯ, ಅಶ್ವಗಳಾದ ಮಾನವಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದವೆಂದು ಭಕ್ತರು ಅಭಿಪ್ರಾಯಪಟ್ಟರು. ಪುರೋಹಿತ ವರ್ಗದವರು ಶಾಸ್ತ್ರೋಕ್ತ ವಿಧಿ-ವಿಧಾನಗಳನ್ನು ಪೂಜ್ಯಶ್ರೀಗಳವರ ಮಾರ್ಗದರ್ಶನದಂತೆ ನೆರವೇರಿಸಿದರು.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ ದೇವರ ದರ್ಶನ ಪಡೆದು ಶ್ರೀಗಳವರಿಂದ ಆಶೀರ್ವಾದ ಪಡೆದರು.

Leave a Comment