HOSANAGARA ; 12 ವರ್ಷದ ಹಿಂದೆ ಮನೆ ಬಿಟ್ಟು ತನ್ನ ಪತಿ ಶಿವಪ್ಪಗೌಡ (68) ಎಂಬುವರನ್ನು ಹುಡುಕಿ ಕೊಡುವಂತೆ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಣಜೆ ಗ್ರಾಮದ ಹೊಸಮನೆಯ ವಾಸಿ ರತ್ನಮ್ಮ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾನಸಿಕವಾಗಿ ದುರ್ಬಲವಾಗಿದ್ದ ಶಿವಪ್ಪಗೌಡ ಕುಡಿತದ ಚಟವನ್ನು ಹೊಂದಿದ್ದರು. ಈ ಹಿಂದೆ ಮೂರ್ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದು ಕೆಲವೊಮ್ಮೆ ಎರಡ್ಮೂರು ವರ್ಷಗಳ ನಂತರ ಹಿಂತಿರುಗುತ್ತಿದ್ದು ಈ ಬಾರಿ 2012ರ ಜನವರಿ 20ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಹೋದವರು ಈವರೆಗೂ ಬಾರದ ಕಾರಣ ಅವರನ್ನು ಹುಡುಕಿ ಕೊಡುವಂತೆ ಪತ್ನಿ ರತ್ನಮ್ಮ ಹೊಸನಗರ ಆರಕ್ಷಕ ಠಾಣೆಗೆ ದೂರು ನೀಡಿದ್ದು ಶಿವಪ್ಪಗೌಡರು ಮನೆ ಬಿಟ್ಟು ಹೋಗುವಾಗ 57 ವರ್ಷ ವಯಸ್ಸಾಗಿದ್ದು ಈಗ ಅವರ ವಯಸ್ಸು 69 ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಅವರೇ ಈ ಹಿಂದೆ 3-4 ಬಾರಿ ಮನೆ ಬಿಟ್ಟು ಹೋದವರು ವಾಪಸ್ ಬಂದಿದ್ದು ಈ ಬಾರಿ 12 ವರ್ಷ ಆದರೂ ಮನೆಗೆ ವಾಪಸ್ ಬಾರದ ಕಾರಣ ತಿಳಿಸಿದ್ದಾರೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.