ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ; SSLC ಮೌಲ್ಯಮಾಪಕರ ವಿರುದ್ಧ ಕ್ರಮ ಜರುಗಿಸಲು ಆಗ್ರಹ

Written by Mahesh Hindlemane

Published on:

ರಿಪ್ಪನ್‌ಪೇಟೆ ; ವರ್ಷಗಟ್ಟಲೇ ಕಠಿಣ ಪರಿಶ್ರಮ ವಹಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರು ತಮ್ಮ ಬೇಜವಾಬ್ದಾರಿ ತನದಿಂದ ಅನುತೀರ್ಣ ಮತ್ತು ಕಡಿಮೆ ಅಂಕಗಳನ್ನು ನೀಡಿ ಅವರ ಭವಿಷ್ಯದಲ್ಲಿ ಚೆಲ್ಲಾಟ ಆಡುತ್ತಿದ್ದು ಇವರ ವಿರುದ್ದ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮತ್ತು ಶಿಕ್ಷಣ ಸಚಿವರಿಗೆ ರಿಪ್ಪನ್‌ಪೇಟೆಯ ಸಾರ್ವಜನಿಕರು, ಪೋಷಕವರ್ಗ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೆಸರಿಗೆ ಪಬ್ಲಿಕ್ ಪರೀಕ್ಷೆಯೆಂದು ಹೇಳುವುದು ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಆಗದಂತೆ ಬಹಳ ಬಂದೋಬತ್ತಿನಲ್ಲಟ್ಟು ಪರೀಕ್ಷೆಗೆ 10 ನಿಮಿಷ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆಯಲ್ಲಿ ತರುವುದು ಹಾಗೂ ಪರೀಕ್ಷಾ ಕೇಂದ್ರದ 100 ಮೀಟರ್ ಸುತ್ತ 144 ಸೆಕ್ಷನ್ ಜಾರಿಗೊಳಿಸಿ ಬಿಗಿ ಭದ್ರತೆ ಒದಗಿಸುವ ಮೂಲಕ ಪರೀಕ್ಷೆಯಲ್ಲಿ ಕಾಪಿ, ಪ್ರಶ್ನೆ ಪತ್ರಿಕೆ ಲೀಕ್ ಆಗದಂತೆ ಕಠಿಣ ಕ್ರಮ ವಹಿಸಿದರೆ ಮೌಲ್ಯಮಾಪಕರು ತಮ್ಮ ಬೇಜವಾಬ್ದಾರಿಯಿಂದಾಗಿ ಹಲವು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಕನಸು ಕಾಣುವಂತಾಗಿದ್ದರೂ ಕೂಡಾ ಅಂತಹ ವಿದ್ಯಾರ್ಥಿಗಳ ಅಂಕವನ್ನು ಕಡಿತಗೊಳಿಸುವುದು ಮತ್ತು ಅಂಕವನ್ನು ಕೂಡುವಾಗಿ ತಪ್ಪಾಗಿ ಎಣಿಸಿ ಫೇಲ್ ಮಾಡುವುದು ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವಂತಾಗಿರುವ ಮೌಲ್ಯ ಮಾಪಕರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಪೋಷಕರಾದ ಸಾಬ್‌ಜಾನ್‌ಸಾಬ್, ಕರಿಬಸಪ್ಪ, ತೋಟಪ್ಪ, ಕಾಮಕ್ಷಪ್ಪ, ಚೇತನಕುಮಾರ್, ಕೋಮಲಪ್ಪ, ಸಹನ, ಗಣೇಶ, ರಂಗಪ್ಪ ಹೀಗೆ ಹಲವರು ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ.

ಮೌಲ್ಯಮಾಪನ ವೇತನಕ್ಕಾಗಿ ಬಹಿಷ್ಕಾರ ಹಾಕುವ ಶಿಕ್ಷಕರು :

ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪಕರು ಸರ್ಕಾರ ಮೌಲ್ಯಮಾಪನಕ್ಕೆ ದರ ಹೆಚ್ಚಳ ಮಾಡುವಂತೆ ಆಗ್ರಹಿಸುವ ಶಿಕ್ಷಕರು ಈ ರೀತಿಯಲ್ಲಿ ಬೇಜವಾಬ್ದಾರಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಮೌಲ್ಯಮಾಪನದ ವೇಳೆ ಅಂಕಗಳನ್ನು ಸರಿಯಾಗಿ ಎಣಿಕೆ ಮಾಡದೆ ಫೇಲ್ ಇಲ್ಲವೇ ಕಡಿಮೆ ಎಣಿಕೆ ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಾರಾಗುವ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಸಹ ಇದೇ ರೀತಿಯಲ್ಲಿ ಕಡಿಮೆ ಅಂಕ ಬಂದಂತಹ ವಿದ್ಯಾರ್ಥಿಗಳು ಮರುಮಾಲ್ಯಮಾಪನಕ್ಕೆ ಹಾಕಿ ಸಾಕಷ್ಟು ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ರಾಜ್ಯ ಪ್ರೌಢಶಿಕ್ಷಣ ಇಲಾಖೆಗೆ ದಂಡವನ್ನಾಗಿ 45 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದ್ದು ಇನ್ನಾದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆಯವರು ಶಿಕ್ಷಣ ಸಚಿವರು ಗಮನಹರಿಸಿ ಇಂತಹ ಬೇಜವಾಬ್ದಾರಿ ಮೌಲ್ಯಮಾಪಕರ ವಿರುದ್ದ ಕಠಿಣ ಕ್ರಮಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಶ್ರಮಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment