ರಿಪ್ಪನ್‌ಪೇಟೆ ; ಮುಂಬರುವ ಗಣೇಶ ಮತ್ತು ಈದ್‌ಮಿಲಾದ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ನೇತೃತ್ವದಲ್ಲಿ ಇಂದು ರೂಟ್ ಮಾರ್ಚ್ ಮಾಡುವ ಮೂಲಕ ಮಾರ್ಗವನ್ನು ಪರಿಶೀಲನೆ ನಡೆಸಿದರು. ನಂತರ ವಿನಾಯಕ ವೃತ್ತ ಮತ್ತು ಹೊಸನಗರ ರಸ್ತೆಯಲ್ಲಿರುವ ಮಸೀದಿಯ ಬಳಿ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ವಿಶೇಷ ಸಲಹೆ ಸೂಚನೆ ನೀಡುವ ಮೂಲಕ ಮೆರವಣಿಗೆಯ ಉದ್ದಕ್ಕೂ ಸಿಸಿ ಕ್ಯಾಮೆರಾ ಇರುವ ಬಗ್ಗೆ ಇತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಉಮೇಶ, ಸಂತೋಷ, ಯೋಗೀಶ್, ಇನ್ನಿರ ಸಿಬ್ಬಂದಿವರ್ಗ ಹಾಜರಿದ್ದರು.
ಕೋಟೆತಾರಿಗ-ಸಂಪಳ್ಳಿಯಲ್ಲಿ ಮನೆಯಲ್ಲಿ ಕಳವು :
ರಿಪ್ಪನ್‌ಪೇಟೆ ; ಕೋಟೆತಾರಿಗ ಮತ್ತು ಸಂಪಳ್ಳಿ ಗ್ರಾಮದ ಮನೆಗಳಲ್ಲಿ ಶುಕ್ರವಾರ ರಾತ್ರಿ ಕಳವು ಕಳ್ಳತನವಾಗಿರು ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಟೆತಾರಿಗಾ ಗ್ರಾಮದ ಯಶವಂತ್ ಎಂಬುವರ ಮನೆಯಲ್ಲಿ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಮನೆಯ ಮೇಲ್ಚಾವಣಿಯ ಹೆಂಚು ಕಿತ್ತು ಒಳಪ್ರವೇಶಿದ ಕಳ್ಳರು ಲಕ್ಷಾಂತರ ರೂ. ಬೆಲೆ ಬಾಳುವಂತಹ ಚಿನ್ನಾಭರಣಗಳ ಸಹಿತ ನಗದನ್ನು ಕದ್ದೊಯ್ದಿದ್ದಾರೆ.
ಇದೇ ರಾತ್ರಿ ಸಂಪಳ್ಳಿ ಗ್ರಾಮದ ಜಯದೇವಪ್ಪಗೌಡ ಎಂಬುವರ ಮನೆಯ ಮೇಲ್ಚಾವಣಿಯ ಹೆಂಚು ಕಿತ್ತು ಮನೆಯ ಒಳಗೆ ನುಗ್ಗಿರುವ ಕಳ್ಳರು ಮನೆಯವರು ಏನೊ ಶಬ್ದ ಬಂದಿದ್ದರಿಂದ ಎಚ್ಚರಗೊಂಡಿರುವುದನ್ನು ಗಮನಿಸಿ ಪರಾರಿಯಾಗಿದ್ದಾರೆನ್ನಲಾಗಿದೆ.
ಒಟ್ಟಾರೆಯಾಗಿ ಕಳೆದ ಒಂದು ತಿಂಗಳಿಂದ ಠಾಣಾ ವ್ಯಾಪ್ತಿಯಲ್ಲಿನ ಬರುವ ಮೂಗುಡ್ತಿ, ಕೋಟೆತಾರಿಗಾ,ರಿಪ್ಪನ್‌ಪೇಟೆ, ಶಬರೀಶನಗರ ಕಡೆಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಹಗಲು, ರಾತ್ರಿ ವೇಳೆ ಹಿಂಬಾಗಿಲ ಮುರಿದು ಮತ್ತು ಮನೆಯ ಹೆಂಚು ಕಿತ್ತು ಕಳ್ಳತನ ಮಾಡಲಾಗಿರುವ ಬಗ್ಗೆ ಜನರಲ್ಲಿ ಭಯ ಉಂಟು ಮಾಡಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.