ಶಿವಮೊಗ್ಗ:ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ, ಜೂನ್ 23 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹಲವಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಹಳ್ಳಿಗಳು:ಕುಂಸಿ, ಬಾಳೆಕೊಪ್ಪ, ಚೋರಡಿ, ತುಪರು, ಕೋಣಿಹೂಸೂರು, ಹೊರಬೈಲು, ಶೇಟ್ಟಿಕೆರೆ, ರೇಚಿಕೊಪ್ಪ, ಹರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಮತ್ತು ಇತರ ಸುತ್ತಮುತ್ತಲ ಹಳ್ಳಿಗಳು ಈ ತಾತ್ಕಾಲಿಕ ವ್ಯತ್ಯಯವಾಗಲಿವೆ.
ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ವಿನಂತಿಸಿದೆ. ನಿರ್ವಹಣಾ ಕಾರ್ಯದ ನಂತರ ವಿತರಣಾ ಸೇವೆ ಸಹಜ ಸ್ಥಿತಿಗೆ ಬರುವುದಾಗಿ ತಿಳಿಸಲಾಗಿದೆ.
Read More:ರಿಪ್ಪನ್‌ಪೇಟೆ ಗ್ರಾ.ಪಂ ಕೆಡಿಪಿ ಸಭೆ | ಕಳ್ಳತನ, ಪುಂಡರ ಹಾವಳಿಗೆ ಕ್ರಮದ ಭರವಸೆ