ಶಿವಮೊಗ್ಗ : ಆಗಸ್ಟ್ 30 ರಂದು ವಿದ್ಯುತ್ ವ್ಯತ್ಯಯ

Written by Koushik G K

Published on:

ಶಿವಮೊಗ್ಗ:ಶಿವಮೊಗ್ಗ ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದ 66 ಕೆವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 30 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೆಸ್ಕಾಂ ಪ್ರಕಟಣೆಯ ಪ್ರಕಾರ, ಈ ಅವಧಿಯಲ್ಲಿ ಅಬ್ಬಲಗೆರೆ, ಕೊಮ್ಮನಾಳು, ಬನ್ನಿಕೆರೆ, ಬೀರನಕೆರೆ, ಬಿಕ್ಕೋನಹಳ್ಳಿ, ಕುಂಚೇನಹಳ್ಳಿ ಮೇಲಿನ/ಕೆಳಗಿನ ತಾಂಡ, ಕಲ್ಲಾಪುರ, ಗೋಂದಿಚಟ್ನಹಳ್ಳಿ, ಮೇಲಿನಹನಸವಾಡಿ, ಹೊಳೆಹನಸವಾಡಿ, ಬೆಳಲಕಟ್ಟೆ, ಕಲ್ಲಗಂಗೂರು, ಹುಣಸೋಡು, ಮೋಜಪ್ಪಹೊಸೂರು, ಬಸವನಗಂಗೂರು, ಮತ್ತೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕ ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕಾರ ನೀಡುವಂತೆ ಮೆಸ್ಕಾಂ ಮನವಿ ಮಾಡಿದೆ.

ಮುಂದುವರೆದ ಭಾರಿ ಮಳೆ ; ಶಿವಮೊಗ್ಗ ಜಿಲ್ಲೆಯ ಈ ತಾಲೂಕಿನ ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಣೆ

Leave a Comment