RIPPONPETE ; ಪ್ರಾಚೀನ ಪ್ರಾಕೃತ ಭಾಷೆಗೆ ಕೇಂದ್ರ ಸರಕಾರವು ಶಾಸ್ತ್ರೀಯ ಭಾಷೆಯೆಂದು ಮನ್ನಣೆ-ಮಾನ್ಯತೆ ನೀಡಿರುವುದಕ್ಕಾಗಿ ಭಾರತದ ಪ್ರಧಾನಿ ಗೌರವಾನ್ವಿತ ನರೇಂದ್ರ ಮೋದಿಯವರಿಗೆ ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿರುವರು.
“ಜೈನ ಶಾಸ್ತ್ರದ ಸಿದ್ಧಾಂತ ತತ್ವ ಗ್ರಂಥಗಳೆಲ್ಲವೂ ಪ್ರಾಕೃತ ಭಾಷೆಯಲ್ಲಿದ್ದು, ಜೈನ ಸಮಾಜದ ವತಿಯಿಂದ ಪ್ರಾಕೃತ ವಿದ್ವಾಂಸರು ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಅಧೀಕೃತ ಮಾನ್ಯತೆ ನೀಡಿರುವುದಕ್ಕಾಗಿ ಸಂತಸಗೊಂಡಿರುವರು ಎಂದು ತಿಳಿಸುತ್ತಾ ಪ್ರಾಕೃತ ಭಾಷೆಯ ಸಂಶೋಧನೆ, ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ಪ್ರೇರಣೆ ನೀಡಿರುವುದು ಶ್ಲಾಘನೀಯ” ಎಂದರು.
ಪ್ರಾಕೃತ ವಿದ್ವಾಂಸರಾದ ಪುಣೆಯ ಡಾ. ಕೆ.ಕೆ. ಜೈನ್, ಡಾ.ಶ್ರವಣಬೆಳಗೊಳದ ಎನ್. ಸುರೇಶ್ ಕುಮಾರ್, ಡಾ. ಜ್ವಾಲಾ ಸುರೇಶ್, ಡಾ. ರಮೇಶ ಪಾಟೀಲ, ಡಾ. ಮಹಾವೀರ ಶಾಸ್ತ್ರಿ ಮತ್ತಿತರ ವಿದ್ವಾಂಸರು ಉಪಸ್ಥಿತರಿದ್ದರು.