ಅಡಿಕೆ ಬೆಳೆಗಾರರ ಸಮಾವೇಶದ ಪೂರ್ವಭಾವಿ ಸಭೆ

Written by malnadtimes.com

Published on:

RIPPONPETE ; ಬರುವ ನವೆಂಬರ್ ತಿಂಗಳಲ್ಲಿ ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ಈ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ ಅಡಿಕೆ ಬೆಳೆಗಾರರೊಂದಿಗೆ ಸಮಾಲೋಚಿಸಿ ಕೈಗೊಳ್ಳಬಹುದಾದ ನಿರ್ಣಯದ ಕುರಿತು ಅಡಿಕೆ ಬೆಳೆಗಾರರ ಪೂರ್ವಭಾವಿ ಸಭೆಯು ರಿಪ್ಪನ್‌ಪೇಟೆಯ ಶಿವಮಂದಿರದಲ್ಲಿ ಇಂದು ಜರುಗಿತು.

WhatsApp Group Join Now
Telegram Group Join Now
Instagram Group Join Now

ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುಖಂಡ ಹಕ್ರೆ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡಿಕೆ ಸೇವನೆಯಿಂದ ಮಾರಕ ರೋಗ ಹರಡುವುದೆಂಬ ತಪ್ಪು ನಿರ್ಧಾರವನ್ನು ಕೈಬಿಟ್ಟು ಆ ಬೆಳೆಯ ಬಗ್ಗೆ ಸಂಶೋಧನೆ ನಡೆಸಿ ಬೆಳೆಗಾರರ ಹಿತ ರಕ್ಷಣೆ ಮಾಡುವುದು ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರ ರೈತರಿಗೆ ಒಂದು ಹೆಕ್ಟೇರ್ ಜಮೀನು ಮಂಜೂರು ಮಾಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡರ ಹೇಳಿಕೆಯನ್ನಾದರಿಸಿ ಮಂಜೂರಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು ಅದೇ ನಿಯಮದಡಿ ಶಿವಮೊಗ್ಗ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಕೆ.ಪಿ.ಟಿ.ಸಿ.ಎಲ್ ಮತ್ತು ಗ್ರಾಮ ಠಾಣಾ ಸೊಪ್ಪಿನಬೆಟ್ಟ ಹೀಗೆ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ಭೂಮಿಯ ಹಕ್ಕು ನೀಡುವುದು ಹೀಗೆ ಅಡಿಕೆ ಬೆಳೆಗಳಲ್ಲಿ ಕಾಣಿಸಿಕೊಂಡಿರುವ ಮಾರಕ ರೋಗಗಳಾದ ಎಲೆಚುಕ್ಕೆ ರೋಗ ಬೇರು ಹುಳು ಹತ್ತು ಹಲವು ರೋಗಗಳಿಂದಾಗಿ ರೈತರು ದಿಕ್ಕು ತಪ್ಪುವಂತಾಗಿದ್ದಾರೆ. ಅಲ್ಲದೆ ಹೊರದೇಶದಿಂದ ಭಾರತಕ್ಕೆ ಬರುತ್ತಿರುವ ಅಡಿಕೆ ತಡೆಯುವುದು ಸೇರಿದಂತೆ ಹಲವು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸುವ ಉದ್ದೇಶದಿಂದ  ಬರುವ ನವೆಂಬರ್‌ನಲ್ಲಿ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶವನ್ನು ಆಯೋಜಿಸಲಾಗಿದ್ದು ಈ ಸಮಾವೇಶದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯದ ಸಚಿವರುಗಳನ್ನು ಆಹ್ವಾನಿಸಿ ಅವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಅಡಿಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಮನವರಿಕೆ ಮಾಡುವ ಮೂಲಕ ಅಡಿಕೆ ಬೆಳೆಗಾರ ಸಮಸ್ಯೆಗೆ ಶಾಶ್ವತ ಪರಿಕಲ್ಪಿಸುವಂತೆ ಆಗ್ರಹಿಸಲು ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ.

ಅಲ್ಲದೆ ಶೀಘ್ರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಂಘಟನೆಯ ಕುರಿತು ಎಚ್ಚರಿಸಲು ಸುಮಾರು 12 ಸಾವಿರಕ್ಕೂ ಅಧಿಕ ಅಡಿಕೆ ಬೆಳೆಗಾರ ಬೃಹತ್ ಜಾಗೃತಿ ಜಾಥಾವನ್ನು ನಡೆಸಲಾಗುವುದು ಈ ಜಾಥಾಕ್ಕೂ ಹೆಚ್ಚಿನ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರ ಸಂಘದ ಮುಖಂಡ ಯು.ಹೆಚ್.ರಾಮಪ್ಪ, ಹೆಚ್.ಎಂ.ವರ್ತೇಶ್ ಗೌಡ, ಬೆಳಂದೂರು ಬಿ.ಹೆಚ್.ನಾಗಭೂಷಣ, ಹೆಚ್.ಎಸ್.ರವಿ ಹಾಲುಗುಡ್ಡೆ, ಡಿ.ಈ.ಮಧುಸೂದನ್, ಡಿ.ವಿ.ಬಸವರಾಜ ದೊಂಬೆಕೊಪ್ಪ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ದೇವೇಂದ್ರಪ್ಪಗೌಡ ನೆವಟೂರು, ರಾಜೇಂದ್ರಗೌಡ ನೆವಟೂರು, ಕಮದೂರು ಕೆ.ಎನ್.ರಾಜಶೇಖರ, ಬೆನವಳ್ಳಿ ಲಿಂಗಪ್ಪ, ಡಿ.ಎಸ್. ಕರುಣೇಶ್ ಇನ್ನಿತರ ಹಲವು ರೈತರು ಭಾಗವಹಿಸಿದರು.

Leave a Comment