ಅಡಿಕೆ ತೋಟದಲ್ಲಿದ್ದ ಹೆಬ್ಬಾವು ರಕ್ಷಣೆ !

Written by Mahesha Hindlemane

Published on:

HOSANAGARA ; ಅಡಿಕೆ ತೋಟಕ್ಕೆ ಬಂದಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುಣಜೆ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಎತ್ತಿಗೆ ಭೋಜಪ್ಪಗೌಡರ ಅಡಿಕೆ ತೋಟದ ಕೆಲಸ ಮಾಡುತ್ತಿದ್ದ ವೇಳೆ ಹೆಬ್ಬಾವು ಮಲಗಿರುವುದು ಕಂಡು ಬಂದಿತ್ತು. ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಅನಿಲ್, ಸಿಬ್ಬಂದಿ ರಾಘವೇಂದ್ರ, ನವೀನ್, ರಮೇಶ್, ಜಗದೀಶ್ ಅವರ ತಂಡ ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.

ಬೃಹದಾಕಾರದ ಹಾವನ್ನು ರಕ್ಷಣೆ ಮಾಡಲು ಸಿಬ್ಬಂದಿಗಳು ಹರಸಾಹಸ ಪಟ್ಟರು. ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಹೆಬ್ಬಾವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Leave a Comment