ರಿಪ್ಪನ್ಪೇಟೆ ; ಕಲಾಕೌಸ್ತುಭ ಕನ್ನಡ ಸಂಘದವರು ಕಳೆದ ನವೆಂಬರ್ ಕನ್ನಡ ರಾಜ್ಯೋತ್ಸವ ಮತ್ತು ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡಾಭಿಮಾನಿಗಳ ಮಿತ್ರ ಬಳಗದವರಿಗಾಗಿ ಲಕ್ಕಿ ಡಿಪ್ ಟಿಕೆಟ್ ಮಾರಾಟ ಮಾಡಲಾಗಿದ್ದು ಕೆಲವು ಟಿಕೆಟ್ಗಳು ಹಾಗೆಯೇ ಉಳಿದಿದ್ದು ಆದನ್ನು ರಾಮನವಮಿಯ ದಿನ ಇಲ್ಲಿನ ವಿನಾಯಕ ವೃತ್ತದಲ್ಲಿ ಸಾರ್ವಜನಿಕ ಹರಾಜು ಮಾಡಲಾದ ಲಕ್ಕಿ ಡಿಪ್ ಟಿಕೆಟ್ ಕೆದಲುಗುಡ್ಡೆ ಶನೇಶ್ವರ ದೇವಸ್ಥಾನದ ಪೂಜಾರಪ್ಪ ನಾಗರಾಜನಿಗೆ ಪ್ರಥಮ ಬಹುಮಾನವಾದ ಎಲೆಕ್ಟ್ರಿಕ್ ಬೈಕ್ (ಟಿಕೆಟ್ ನಂ.1968) ಮನೆಗೆ ಕೊಂಡೊಯ್ಯುವ ಅದೃಷ್ಟ ಒಲಿಯಿತು.
ಇದೇ ಸಂದರ್ಭದಲ್ಲಿ ಲಕ್ಕಿ ಡಿಪ್ನ ದ್ವಿತೀಯ ಬಹುಮಾನ ಸೈಕಲ್ (ನಂ.1891) ಅನ್ನು ಮನೆಗೆ ಒಯ್ಯುವ ಅವಕಾಶ ದೊರೆಯಿತು.
ಅದೃಷ್ಟ ಶಾಲಿಗಳಿಗೆ ಬಹುಮಾನವನ್ನು ಬೆಂಗಳೂರು ಉದ್ಯಮಿ ಮಹೇಂದ್ರಗೌಡ ವಿತರಿಸಿ ಮಾತನಾಡಿ, ತಾಂತ್ರಿಕ ಕಾರಣದಿಂದಾಗಿ ಲಕ್ಕಿಡಿಪ್ ಡ್ರಾ ವಿಳಂಬವಾಗಿದೆ. ಆದರೆ ಕೆಲವು ಮಾಧ್ಯಮದವರು ಸಂಘಕ್ಕೆ ಮಸಿ ಬಳಿಯುವ ಹುನ್ನಾರದಿಂದ ಠಾಣೆಯಲ್ಲಿ ದೂರು ನೀಡಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘದ ಹೆಸರಿನಲ್ಲಿ ಮಾಡಲಾದ ಲಕ್ಕಿಡಿಪ್ ಡ್ರಾ ಮಾಡದೆ ವಂಚನೆ ಮಾಡಿದ್ದಾರೆಂದು ಅಪಪ್ರಚಾರ ಮಾಡಿರುವುದು ಅಸಮದಾನಕ್ಕೆ ಕಾರಣವಾಗಿದೆ. ಕಲಾಕೌಸ್ತುಭ ಕನ್ನಡ ಸಂಘ ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗುವುದರೊಂದಿಗೆ ಸಂಘದ ಕಾರ್ಯ ವನ್ನು ಪ್ರಶಂಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಬಡ ದೇವಸ್ಥಾನದ ಪೂಜಾರಪ್ಪ ನಾಗರಾಜನಿಗೆ ದೇವರು ಅದೃಷ್ಟದ ಬಾಗಿಲು ತೆರೆದಿರುವುದು ಸಂತೋಷತಂದಿದೆ ಎಂದರು.
ನಂತರ ಕಲಾಕೌಸ್ತುಭ ಕನ್ನಡ ಸಂಘದಿಂದ ಬೆಂಗಳೂರು ಉದ್ಯಮಿ ಮಹೇಂದ್ರಗೌಡರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳೀಧರ ಕೆರೆಹಳ್ಳಿ, ಕಾರ್ಯದರ್ಶಿ ರಾಮಚಂದ್ರ ಬಳೆಗಾರ್, ಎಂ.ಬಿ.ಮಂಜುನಾಥ, ಎಂ. ಸುರೇಶಸಿಂಗ್, ಸುಧೀರ್ ಪಿ, ಹಿರಿಯಣ್ಣ ಭಂಡಾರಿ, ರಾಘು, ರೇಖಾ ರವಿ, ಸೀತಾ ರಾಜಪ್ಪ, ಗೀತಾ ಅಣ್ಣಪ್ಪ, ವೇದಾವತಿ, ಶೈಲಾ ಆರ್.ಪ್ರಭು, ನಿರೂಪ್ಕುಮಾರ್, ಇನ್ನಿತರರು, ಸಂಘದ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





