KALASA ; ಉರಗ ಸಂತತಿಯಲ್ಲೇ ಅತ್ಯಂತ ಅಪಾಯಕಾರಿ ಎಂದು ಹೇಳಲಾದ ರಕ್ತಗನ್ನಡಿ ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದೆ.

ಮಲೆನಾಡಿನಲ್ಲಿ ಈ ಹಾವಿಗೆ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವೆಂದು ಕರೆಯುತ್ತಾರೆ. ದೇಹದ ಮೇಲೆ ಕಪ್ಪು ಬಣ್ಣವನ್ನು ಹೊಂದಿದ್ದು, ಕೆಳ ಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಈ ಹಾವು ಕಚ್ಚಿದರೆ ಸಾಯೋದು ಕಡಿಮೆ. ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ ಎಂದು ಹೇಳಲಾಗುತ್ತಿದೆ.

ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ. ಅಲ್ಲದೆ ಪಶ್ಚಿಮಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಈ ಹಾವು ಕಳಸದ ಉರಗ ತಜ್ಞ ರಿಜ್ವಾನ್ ಅವರ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದ್ದು ರಿಜ್ವಾನ್ ಅದನ್ನು ರಕ್ಷಿಸಿದ್ದಾರೆ.


ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.