HOSANAGARA ; ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸಾಗರದ ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಅವರನ್ನು ಭೇಟಿ ಮಾಡಿ, ಮುಂಬರುವ ತೋಟಗಾರಿಕಾ ಸಮಾವೇಶದಲ್ಲಿ ಇಲಾಖೆ ವತಿಯಿಂದ ಮಳಿಗೆ ತೆರೆದು ಬೆಳೆಗಾರರಿಗೆ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಉಪಾಧ್ಯಕ್ಷ ಬಸವರಾಜ ದೊಂಬೆಕೊಪ್ಪ, ನಿರ್ದೇಶಕರಾದ ವಿಜಯೇಂದ್ರ ತಲಗುಂದ, ನಾಗಾನಂದ ಬೇಳೂರು, ಸಂಪ ಲಕ್ಷ್ಮೀನಾರಾಯಣ ಹಾಜರಿದ್ದರು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

