ಕೊಲ್ಲೂರು ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ

Written by Mahesha Hindlemane

Published on:

ಹೊಸನಗರ ; ಹೊಸನಗರದಿಂದ ಕೊಲ್ಲೂರು-ಬೈಂದೂರು ಮಾರ್ಗವಾಗಿ ಹೋಗುವ ರಸ್ತೆಗಳಲ್ಲಿ ಭಾರಿ ತೂಕದ ಅಂದರೆ 10 ರಿಂದ 16 ಚಕ್ರದ ಲಾರಿಗಳು ಓಡಾಟ ನಡೆಸುತ್ತಿದ್ದು ಈ ಭಾರಿ ಗಾತ್ರದ ವಾಹನಗಳು ಆಗಾಗೆ ರಸ್ತೆಯ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಬಸ್‌ಗಳಿಗೆ ಹಾಗೂ ಸಣ್ಣ-ಸಣ್ಣ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆ ಭಾಗದ ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದವರೊಂದಿಗೆ ತೋಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೊಲ್ಲೂರು ಘಾಟಿಯಲ್ಲಿ ಇತ್ತೀಚೆಗೆ ಸಿಮೆಂಟ್ ತುಂಬಿದ ಲಾರಿಯೊಂದು ಕೆಟ್ಟು ರಸ್ತೆಗೆ ಅಡ್ಡ ನಿಂತು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಕೊಲ್ಲೂರು ಮಾರ್ಗವಾಗಿ ಹೋಗಿ ಬರುತ್ತಿದ್ದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಕ್ತರಿಗೆ ತೊಂದರೆಯಾಗಿದ್ದು ಈ ಸಮಯದಲ್ಲಿ ಮಾತನಾಡಿದ ನಿಟ್ಟೂರು ಅಡಗೋಡಿ, ಮತ್ತಿಮನೆ, ಕೆ.ಬಿ ಸರ್ಕಲ್ ಗ್ರಾಮಸ್ಥರು ಈ ರೀತಿಯ ವಾಹನಗಳು ಓಡಾಟ ನಡೆಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ನಮಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಆಗಾಗ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಅದು ಅಲ್ಲದೇ ಈ ಮಾರ್ಗದಲ್ಲಿ ವಾರಕ್ಕೊಮ್ಮೆ ಒಂದೆರಡು ಅಪಘಾತ ನಡೆಯುತ್ತಿದ್ದು ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ದುರ್ಗಾಂಬಾ ಬಸ್ ಸಂಚರಿಸುತ್ತಿರುವುದರಿಂದ ನಮಗೆಲ್ಲರಿಗೂ ಅನುಕೂಲವಾಗಿದ್ದು ಭಟ್ಕಳ-ಬೆಂಗಳೂರು ಮಾರ್ಗದ ಸರ್ಕಾರಿ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅದು ಅಲ್ಲದೇ ಬಂದರೂ ಕೆಲವು ಕಡೆ ಬಸ್ ನಿಲ್ಲಿಸದೆ ಎಕ್ಸ್‌ಪ್ರೆಸ್‌ ಹೋಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರುಗಳು ಕೊಲ್ಲೂರು ಮಾರ್ಗದಲ್ಲಿ ಭಾರೀ ಗಾತ್ರದ ವಾಹನಕ್ಕೆ ಕಡಿವಾಣ ಹಾಕಿ ಎಂದು ಆ ಭಾಗದ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Comment