ಅಂಬೇಡ್ಕರ್ ಸವಿನೆನಪಿಗಾಗಿ ಉಚಿತ ಪುಸ್ತಕ ವಿತರಿಸಿದ ನಿವೃತ್ತ ಶಿಕ್ಷಕ ಕುಬೇಂದ್ರಪ್ಪ

Written by Mahesha Hindlemane

Published on:

ಹೊಸನಗರ ; ಇತ್ತಿಚೀನ ದಿನಗಳಲ್ಲಿ ಬುದ್ಧಿವಂತರು ಜ್ಞಾನ ಉಳ್ಳವರು ಪುಸ್ತಕಗಳನ್ನು ಕೊಂಡು ಓದುತ್ತಾರೆ ಕೆಲವರಿಗೆ ಕೊಂಡು ಓದುವುದಕ್ಕಾಗಿ ಕಷ್ಟಕರವಾಗಲಿದ್ದು ಅದಕ್ಕಾಗಿ ಕೆಲವರು ಒಂದಿಷ್ಟು ಪುಸ್ತಕಗಳನ್ನು ಉಚಿತವಾಗಿ ಗ್ರಂಥಾಲಯಗಳಿಗೆ ನೀಡುವುದರಿಂದ ಗ್ರಂಥಾಲಯಕ್ಕೆ ಬರುವ ಚಂದದಾರರು ಪುಸ್ತಕಗಳನ್ನು ಓದಿ ದೇಶ ವಿದೇಶಗಳ ನಮ್ಮ ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಮಾವಿನಕೊಪ್ಪ ಸರ್ಕಾರಿ ಪಾಥಮಿಕ ಪಾಠ ಶಾಲೆಯ ನಿವೃತ್ತ ಶಿಕ್ಷಕ ಕುಬೇಂದ್ರಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿರುವ ತಾಲ್ಲೂಕು ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಎಲ್ಲ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕರಿಗೆ ಓದುಗಾರರಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಡಾ|| ಬಿ ಆರ್ ಅಂಬೇಡ್ಕರ್ ರವರ ಜನ್ಮದಿನದ ನೆನಪಿಗಾಗಿ ಈ ದಿನ ಉಚಿತವಾಗಿ ಪುಸ್ತಕ ವಿತರಣೆ ಮಾಡಿದ್ದು ಮಹಾನ್ ವ್ಯಕ್ತಿಯಾದ, ಮಹಾನ್ ಚೇತನರಾದ ಅಂಬೇಡ್ಕರ್, ಪ್ರಪಂಚದ ಒಂದು ಸಮೀಕ್ಷೆ ಪ್ರಕಾರ ಇಡೀ ಪ್ರಪಂಚದಲ್ಲಿಯ ಅತ್ಯಂತ ಹೆಚ್ಚು ಪುಸ್ತಕ ಓದಿದ ವ್ಯಕ್ತಿ ಯಾರಾದರು ಇದ್ದರೆ ಅದು ಅಂಬೇಡ್ಕರ್ ಮಾತ್ರ. ಅವರು ಅಂದು ರಚಿಸಿದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದ್ದು ಯಾರಾದರೂ ಸಾಹಿತಿಗಳು, ಇತಿಹಾಸವನ್ನು, ಕಾದಂಬರಿಯನ್ನು, ಕವನಗಳನ್ನು ಬರೆಯಬಹುದು. ಆದರೆ ಇಡೀ ಮಾನವ ಜನಾಂಗಕ್ಕೆ ಅದು ಭಾರತದಂತಹ ಜಾತ್ಯಾತೀತ ರಾಷ್ಟ್ರಕ್ಕೆ ಒಂದು ಸಂವಿಧಾನ ರಚಿಸುವುದೆಂದರೆ ಸಾಮಾನ್ಯದ ಮಾತಲ್ಲ ಅಂತಹ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿಯ ನೆನಪಿಗಾಗಿ ಕೆಲವು ಪುಸ್ತಕಗಳನ್ನು ಓದೋಣ ಅದೆಲ್ಲ ಪುಸ್ತಕಗಳನ್ನು ತಪ್ಪದೆ ಓದೋಣ ಎಂದು ಹೇಳಿ, ಅವರ ಸವಿನೆನಪಿಗಾಗಿ ಇಂದು ಪುಸ್ತಕವನ್ನು ವಿತರಣೆ ಮಾಡಿದರು.

ಈ ಪುಸ್ತಕ ವಿತರಿಸುವ ಸಂದರ್ಭದಲ್ಲಿ ಶಿಕ್ಷಕರಾದ ದೇವಾರಾಜ, ಗಣೇಶ್ ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕರಾದ ಕೇಶವ, ಗೌತಮ್ ಕುಮಾರಸ್ವಾಮಿ, ಗ್ರಾಮ ಸಹಾಯಕ ನಾಗಪ್ಪ, ಪತ್ರಕರ್ತ ಹೆಚ್.ಎಸ್. ನಾಗರಾಜ್, ಗ್ರಂಥಾಲಯದ ಸಿಬ್ಬಂದಿಗಳಾದ ಪ್ರಿಯಲತಾ, ರೂಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment