Ripponpete | ಕಿಡಿಗೇಡಿಗಳು ರಾತ್ರೋರಾತ್ರಿ 10ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು (Cocoanut) ಕಡಿದು ವಿಕೃತಿ ಮೆರೆದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲ್ಲೂಕಿನ ಹೆದ್ದಾರಿಪುರ (Heddaripura) ಗ್ರಾ.ಪಂ. ವ್ಯಾಪ್ತಿಯ ವಡಾಹೊಸಹಳ್ಳಿ (Vadahosalli) ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಮ್ಮ ಎಂಬುವರಿಗೆ ಸೇರಿದ ತೋಟದಲ್ಲಿ 10ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದು ಈ ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಡಾಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಮ್ಮ ಕೋಂ ಗೋಪಾಲ ರವರ ತೋಟದ ಮಧ್ಯೆ ಮತ್ತು ಅಂಚುಗಳಲ್ಲಿ ತೆಂಗಿನ ಮರಗಳನ್ನು ಕಡಿಯಲಾಗಿದೆ. ತೋಟದ ಅಂಚಿನಲ್ಲಿ ಮನೆ ಇದ್ದು ಬುಧವಾರ ತಡರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಡಾಹೊಸಳ್ಳಿ ಗ್ರಾಮದ ಸ.ನಂ.28ರಲ್ಲಿ 1.20 ಎಕರೆ ಜಮೀನನ್ನು ಸುಮಾರು ವರ್ಷಗಳಿಂದ ಬಗಹುಕುಂ ಸಾಗುವಳಿ ಮಾಡುತ್ತಿರುವ ಲಕ್ಷ್ಮಮ್ಮ ಈ ಜಮೀನಿಗೆ ಸುತ್ತಲು ಕಲ್ಲು ಕಂಬದ ಬೇಲಿ ನಿರ್ಮಿಸಿದ್ದಾರೆ. ಜಮೀನಿನ ಮಂಜೂರಾತಿಗಾಗಿ ಈ ಹಿಂದೆಯೇ ಫಾರಂ ನಂ. 53ಯಡಿ ಅರ್ಜಿ ಸಲ್ಲಿಸಿದ್ದಾರೆ.
ಮೇ 29 ರಂದು ಮಧ್ಯರಾತ್ರಿ ಸುಮಾರು 2-00 ಗಂಟೆ ಸುಮಾರಿಗೆ ಕಿಡಿಗೇಡಿಗಳು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಅದೇ ಗ್ರಾಮದ ಅನುಮಾನಾಸ್ಪದ ಐವರು ವ್ಯಕ್ತಿಗಳ ಮೇಲೆ ತೋಟದ ಮಾಲೀಕರು ದೂರು ನೀಡಿದ್ದಾರೆ.
Adike Price 30 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?