RIPPONPETE ; ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿಧೆಡೆಯಲ್ಲಿ ಶ್ರದ್ದಾಭಕ್ತಿಯಿಂದ ಗೋಪೂಜೆಯನ್ನು ನೆರವೇರಿಸಿದರು.
ಇಲ್ಲಿನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೆಖರ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಅಕ್ಕಿ, ಗೋಧಿ, ಬಾಳೆಹಣ್ಣು, ಬೆಲ್ಲ ನೀಡಿ ವಿಶೇಷ ಪೂಜೆ ಸಲ್ಲಿಸಿದರೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮಠದ ಪ್ರಾಂಗಣದಲ್ಲಿ ಗೋಪೂಜೆಯನ್ನು ನೆರವೇರಿಸಿ ರೈತರ ನಿತ್ಯದ ಕಾಯಕ ಯೋಗಿಯಂತಾಗಿರುವ ಗೋ ಮಾತೆಯಿಂದ ಮುಕೋಟಿ ದೇವರುಗಳನ್ನು ಪೂಜೆ ಮಾಡಿದ ಫಲ ಲಭಿಸುವುದು ಎಂದರು.
ಅದೇ ರೀತಿಯಲ್ಲಿ ಮುಸ್ಲಿಂ ಕುಟುಂಬದವರು ಗೋಪೂಜೆಯನ್ನು ಹಿಂದೂ ಸಂಪ್ರದಾಯದಂತೆ ಗೋ ಮಾತೆಗೆ ಹೂವು ಕಟ್ಟಿ ಅಲಂಕಾರ ಮಾಡಿ ಮೂಜಿಸುವ ಮೂಲಕ ಭಾವೈಕ್ಯತೆಯನ್ನು ಮೆರೆದಿರುವುದು ವಿಶೇಷವಾಗಿತ್ತು.
ಶ್ರಮದಾನದೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ ಕೋಣಂದೂರು ಮಠದ ಭಕ್ತರು
RIPPONPETE ; ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ನವಂಬರ್ 7 ಮತ್ತು 8 ರಂದು ಆಯೋಜಿಸಲಾಗಿರುವ ಗುರು ವಿರಕ್ತರ ಸಮಾಗಮ ಮತ್ತು 1008 ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ಆಂಗವಾಗಿ ಇಂದು ಕೋಣಂದೂರು ಬೃಹನ್ಮಠದ ಭಕ್ತ ಸಮೂಹ ಸಾಮೂಹಿಕವಾಗಿ ಪಾಲ್ಗೊಂಡು ಮಠದ ಸ್ವಚ್ಚತಾ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸಿದರು.
ಗವಟೂರಿನ ಜಿ.ಡಿ.ಮಲ್ಲಿಕಾರ್ಜುನ ನೇತೃತ್ಚಬದಲ್ಲಿ 30ಕ್ಕೂ ಹೆಚ್ಚಿನ ಯುವಕರ ತಂಡ ಶ್ರಮದಾನದಲ್ಲಿ ತೊಡಗಿದರು.
ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ತೊಗರ್ಸಿ ಮಳೆ ಹಿರೇಮಠದ
ಅಭಿನವ ಮಹಾಂತದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕೂಡಲಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ ಭಕ್ತರನ್ನು ಅಭಿನಂದಿಸಿ ಶುಭ ಹಾರೈಸಿದರು.
ಗವಟೂರು, ಕುಕ್ಕಳಲೇ, ಜಂಬಳ್ಳಿ, ಶಿವಪುರ, ಹರತಾಳು, ನೆವಟೂರು, ರಿಪ್ಪನ್‌ಪೇಟೆ ಇನ್ನಿತರ ಗ್ರಾಮಗಳ ಭಕ್ತರು ಹಾಜರಿದ್ದರು.
ಬೆಳಕೋಡು ಹಾಲಸ್ವಾಮಿಗೌಡ, ನಿರಂಜನ ಸ್ವಾಮಿ ಮಲ್ಲಾಪುರ, ನೆವಟೂರು ದೇವೇಂದ್ರಪ್ಪಗೌಡ, ಮಲ್ಲಿಕಾರ್ಜುನ ಗವಟೂರು, ಚಿದಾನಂದ ಗವಟೂರು, ಸೂರ್ಯಗೌಡ, ಜಿ.ಎಂ.ರಚನಗೌಡ, ಕೀರ್ತಿಗೌಡ ಕುಕ್ಕಳಲೇ, ಈಶ್ವರಪ್ಪಗೌಡ, ಭರತ, ದೊರೆಸ್ವಾಮಿ ಹುಳಗದ್ದೆ, ವೀರೇಶ ಬೆಳಕೋಡು, ನವೀನ, ಬೈರೇಶ, ಅಭಿಷೇಕ, ಗೌತಮ್, ಅರುಣ್, ಸುನೀಲ್, ದರ್ಶನ, ಆದರ್ಶ, ಧರ್ಮರಾಜ್, ಶಿವಕುಮಾರಗೌಡ ನಂಜುವಳ್ಳಿ, ಓಂಕಾರಗೌಡ, ಗಣೇಶ, ಸದಾನಂದ ಜಂಬಳ್ಳಿ ಇನ್ನಿತರರು ಹಾಜರಿದ್ದರು.