RIPPONPETE | ಸಾಲಬಾಧೆ ತಾಳಲಾರದೆ ರೈತನೋರ್ವ (Farmer) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಕೆಂಚನಾಲ (Kenchanala) ಗ್ರಾಮದಲ್ಲಿ ನಡೆದಿದೆ.
ಕೆಂಚನಾಲ ಗ್ರಾಮದ ಕೊಲ್ಲೂರಪ್ಪ (55) ಆತ್ಮಹತ್ಯೆಗೆ ಶರಣಾದ ರೈತ. ಈತ ಕಳೆದ ವರ್ಷದ ಮಳೆ ಸರಿಯಾಗಿ ಬಾರದೆ ಬೆಳೆ ನಷ್ಟವಾಗಿದ್ದು ಈ ಬಾರಿ ಮಳೆ ಹೆಚ್ಚಾಗಿ ಹಾಕಿದ ಶುಂಠಿ, ಅಡಿಕೆ ಬೆಳೆ ನಾಶವಾಗಿದ್ದು ಬೆಳೆಯ ಮೇಲೆ ಮಾಡಲಾದ ಸಾಲ ಬಾಧೆಯಿಂದ ಮನನೊಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಧರ್ಮಸ್ಥಳ ಸಂಘದಲ್ಲಿ ಬೆಳೆ ಅಭಿವೃದ್ದಿಗೆ 4 ಲಕ್ಷ ರೂ., ಚೈತನ್ಯ ಫೈನಾಸ್ಸ್ ನಲ್ಲಿ 76 ಸಾವಿರ ರೂ. ಹಾಗೂ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಬಂಗಾರ ಅಡವಿಟ್ಟ ಸಾಲ 3 ಲಕ್ಷ ರೂ. ಹಾಗೂ ಯೂನಿಯನ್ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಸಾಲ ಪಡೆದು ಬೆಳೆಗೆ ಖರ್ಚು ಮಾಡಿದ್ದರು. ಈಗ ಮಳೆ ಅತಿಯಾಗಿ ಬಂದಿದ್ದರಿಂದ ಶುಂಠಿ ಬೆಳೆಯು ಸರಿಯಾಗಿ ಬೆಳೆಯದೇ ಇರುವುದರಿಂದ ರೈತ ಕೊಲ್ಲೂರಪ್ಪ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ನೀಡಲಾದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.