ರಿಪ್ಪನ್‌ಪೇಟೆ ; ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಅವರನ್ನು ಸನ್ಮಾನಿಸಿ ಗೌರವಿಸಿದಾಗ ದೊರೆಯುವ ಆನಂದವೇ ಬೇರೆ ಎಂದು ಶಿಕ್ಷಕಿ ಹೇಮಲತಾ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ 1997-98ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಆಯೋಜಿಸಲಾದ “ಗುರುವಂದನಾ’’ ಮತ್ತು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಈ ರೀತಿಯಲ್ಲಿ ಗುರುಗಳನ್ನು ಸನ್ಮಾನಿಸಿ ಸತ್ಕರಿಸುವುದರಿಂದ ಗುರು ಶಿಷ್ಯರ ಬಾಂಧವ್ಯ ಇನ್ನೂ ಇಮ್ಮಡಿಗೊಳುವಂತೆ ಮಾಡುವುದು ಎಂದು ಹೇಳಿ ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಬೆರಳನ್ನು ಗುರುಕಾಣಿಕೆಯಾಗಿ ಸಮರ್ಪಿಸಿದ, ಆದರೆ, ಗುರುಗಳು ಆ ರೀತಿ ಗುರು ದಕ್ಷಿಣೆಯನ್ನು ನಿರೀಕ್ಷಿಸದೇ ನಮ್ಮಿಂದ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಏನೂ ಸಾಧನೆ ಮಾಡುತ್ತಿದ್ದಾರೆಂದು ನಾಲ್ಕು ಜನ ಮಾತನಾಡಿದರೆ ಸಾಕು ಅದೇ ನಮಗೆ ತೃಪ್ತಿದಾಯಕ ಎಂದರು.
25 ವರ್ಷಗಳ ನಂತರ ಗುರು-ಶಿಷ್ಯರ ಸಮ್ಮಿಲನ ವಿಶೇಷವಾಗಿತ್ತು.
ಗುರುಗಳಾದ ಆಣ್ಣಪ್ಪ, ಯಶೋಧ, ಕುಮಾರಸ್ವಾಮಿ, ಆರ್ ಲತಾ, ದಾಮೋದರ, ನಾರಾಯಣಪ್ಪ, ಮಲ್ಲಿಕಾರ್ಜುನ, ಕೆಸಿನಮನೆ ರತ್ನಾಕರ್, ಇವರನ್ನು ಶಿಷ್ಯಬಳಗ ಸನ್ಮಾನಿಸಿ ಅಭಿನಂದಿಸಿದರು.
ಡಾ.ಗಣೇಶ ಕೆಂಚನಾಲ, ನಾಗೇಶ ಹೆಬ್ಬಾರ್, ಮಳವಳ್ಳಿ ಮಂಜುನಾಥ, ವೀರೇಶ ಬೆಳಕೋಡು, ಶ್ರೀನಿವಾಸ ಆಚಾರ್, ಎಲ್.ಡಿ.ಶ್ರೀಹರ್ಷ, ಗಣೇಶ, ರಹೀಂ ಇನ್ನಿತರ ಶಿಷ್ಯ ವೃಂದ ಹಾಜರಿದ್ದರು.