ರಿಪ್ಪನ್‌ಪೇಟೆ ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರು ಕಳೆದ 11 ದಿನಗಳ ಕಾಲ ಪ್ರತಿಷ್ಟಾಪಿಸಲಾದ ಗಣಪತಿಮೂರ್ತಿ 19 ಗಂಟೆಗಳ ರಾಜಬೀದಿ ಉತ್ಸವದೊಂದಿಗೆ ಇಂದು ಗವಟೂರಿನ ತಾವರೆಕೆರೆಯಲ್ಲಿ 12:40 ಕ್ಕೆ ಜಲಸ್ತಂಭನಗೊಳಿಸಲಾಯಿತು.
ಶವಿವಾರ ಸಂಜೆ 5.45 ರಿಂದ ವಿಸರ್ಜನಾ ಮೆರವಣಿಗೆ ಸುಮಾರು 19 ಗಂಟೆಗಳ ಕಾಲ ನಡೆದು ಇಂದು ಮಧ್ಯಾಹ್ನ 12.40ಕ್ಕೆ ಗಣೇಶಮೂರ್ತಿಯನ್ನು ವಿಸರ್ಜನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಕಾರ್ಯದರ್ಶಿ ಮುರುಳಿಧರ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಗಣೇಶನಿಗೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಹಾಲಪ್ಪ
ರಿಪ್ಪನ್‌ಪೇಟೆ ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಗಣೇಶ ವಿಸರ್ಜನಾ ರಾಜಬೀದಿ ಉತ್ಸವದಲ್ಲಿ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಪಾಲ್ಗೊಂಡು ಗಣಪತಿಗೆ ಮಾಲಾರ್ಪಣೆ ಮಾಡಿ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಕಾರ್ಯದರ್ಶಿ ಮುರುಳಿಧರ ಕೆರೆಹಳ್ಳಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎಂ.ಸುರೇಶಸಿಂಗ್, ಜಗನ್ನಾಥ ಬಂಗೇರಾ, ಪದ್ಮಾ ಸುರೇಶ, ರೇಖಾ ರವಿ, ಅಶ್ವಿನಿ, ಜಿ.ಡಿ.ಮಲ್ಲಿಕಾರ್ಜುನ, ಸುಧೀಂದ್ರ ಪೂಜಾರಿ, ಲಕ್ಷ್ಮಿ ಶ್ರೀನಿವಾಸ ಆಚಾರ್, ಮೆಣಸೆ ಆನಂದ, ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.