ಮನೆ ಬೀಗ ಮುರಿದು ನಗ-ನಾಣ್ಯ ದೋಚಿದ ಖದೀಮರು !

Written by malnadtimes.com

Published on:

RIPPONPETE | ನೆವಟೂರು ಗ್ರಾಮದ ಮನೆಯೊಂದಲ್ಲಿ ರಾತ್ರಿ ವೇಳೆ ಯಾರು ಇಲ್ಲದ ಸಮಯದಲ್ಲಿ ಮನೆಯ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ನೆವಟೂರು ಗ್ರಾಮದ ನಾಗರಾಜ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು ನಾಗರಾಜ ಕುಟುಂಬ ಸೋಮವಾರ ರಾತ್ರಿ ತಮ್ಮ ಸಂಬಂಧಿಕರೊಬ್ಬರ ಅನಾರೋಗ್ಯದ ಹಿನ್ನಲೆಯಲ್ಲಿ ತೀರ್ಥಹಳ್ಳಿಗೆ ತೆರಳಿದ್ದರು. ಮಂಗಳವಾರ ಮಧ್ಯಾಹ್ನ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದಿದ್ದು ಕಂಡುಬಂದಿತ್ತು ತಕ್ಷಣ ಮನೆಯೊಳಗೆ ಹೋಗಿ ನೋಡಿದಾಗ ರೂಂ ನೊಳಗಿನ ಗಾಡ್ರೇಜ್ ಬೀರುವಿನ ಬೀಗ ಮುರಿದು ಅದರಲ್ಲಿದ್ದ ಸುಮಾರು 60 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 70 ಸಾವಿರಕ್ಕೂ ಅಧಿಕ ನಗದನ್ನು ಕಳ್ಳತನವಾಗಿರುವ ವಿಚಾರ ತಿಳಿದಿದೆ.

ಜು.12ರವರೆಗೆ ಮುಂದುವರೆಯಲಿದೆ ಭಾರಿ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು ಪಿಎಸ್‌ಐ ಎಸ್.ಪಿ.ಪ್ರವೀಣ್ ಹಾಗೂ ಸಿಬ್ಬಂದಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಹೊಸನಗರ ವೃತ್ತ ನಿರೀಕ್ಷಕರು ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದು ಶೀಘ್ರದಲ್ಲಿ ಕಳವು ಮಾಡಿರುವ ಆರೋಪಿಗಳ ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೂನ ಗ್ರಾಮದ ಒಂಟಿ ಮನೆಯಲ್ಲಿ ಸಹ ಹಗಲಿನಲ್ಲಿಯೇ ಹೆಂಚು ಕಿತ್ತು ಮನೆಯೊಳಗೆ ಇಳಿದು ಕಳ್ಳತನವಾಗಿರುವುದು ಇದರ ಬೆನ್ನಲೇ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತನ ನಡೆದಿರುವುದು ಪೊಲೀಸ್ ಇಲಾಖೆ ತಲೆನೋವಾಗಿ ಪರಿಣಮಿಸಿದೆ.

ಕಾಳುಮೆಣಸು ಧಾರಣೆ ( Black Pepper Price) :
650– 665 /- (K.G.)

Leave a Comment