ರಿಪ್ಪನ್‌ಪೇಟೆ ; ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು ಇದರಿಂದ ಅಭಿವೃದ್ದಿಗೆ ಅನುದಾನದ ಹೊಳೆಯೇ ಹರಿದು ಬರಲಿದ್ದು ಶೀಘ್ರದಲ್ಲಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತವನ್ನು ಸ್ಮಾಟ್ ಹೈಟೆಕ್ ಸರ್ಕಲ್ ಆಗಿ ಪರಿವರ್ತನೆ ಮಾಡುವುದಾಗಿ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ರಿಪ್ಪನ್‌ಪೇಟೆಗೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಮತ್ತು ಸಾಗರ ರಸ್ತೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ತಕ್ಷಣ ಬೋರ್‌ವೆಲ್ ಕೊರಸುವಂತೆ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಮನವಿ ಮಾಡುತ್ತಿದ್ದಂತೆ ಸ್ಥಳದಲ್ಲಿದ ಪಿಡಿಓರಿಗೆ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂಬ ಬಗ್ಗೆ ಮಾಹಿತಿ ನೀಡಿ ತಕ್ಷಣ ಟಾಸ್ಕ್ ಫೋರ್ಸ್ ರಿಪ್ಪನ್‌ಪೇಟೆಗೆ ಅಗತ್ಯವಿರುವ ಕಡೆಯಲ್ಲಿ ಬೋರ್‌ವೆಲ್ ಕೊರೆಸುವಂತೆ ಬೋರ್ ಪಾಯಿಂಟ್ ಮಾಡಿಕೊಳ್ಳುವಂತೆ ಸೂಚಿಸಿದ ಶಾಸಕರು ಅಧಿವೇಶನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯ್ತಿಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಸಭೆಯನ್ನು ಕರೆದು ವಿನಾಯಕ ವೃತ್ತವನ್ನು ಅಗಲೀಕರಣಕ್ಕಾಗಿ 1.20 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ವಿನಾಯಕ ವೃತ್ತ 100 ಮೀಟರ್ ಸುತ್ತಳತೆಯ ರಸ್ತೆ ಮಧ್ಯದಲ್ಲಿ ಅಶೋಕ ಸ್ತಂಭ ನಿರ್ಮಿಸಿ ಹೈಮಾಸ್ಟ್ ದೀಪವನ್ನು ಅಳವಡಿಸುವುದು ಮತ್ತು ನಾಲ್ಕು ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಕರಿಗೆ ತಂಗುದಾಣ (ಶೆಲ್ಟರ್) ನಿರ್ಮಾಣ ಮತ್ತು ಪ್ಯಾಸೆಂಜರ್ ಆಟೋದವರಿಗೆ ವಾಹನ ನಿಲುಗಡೆಗೆ ಜಾಗ ಮೀಸಲಿಡುವುದು ಮತ್ತು ರಸ್ತೆ ಬದಿಯಲ್ಲಿ ಪಾದಚಾರಿಗಳಿಗೆ ಫುಟ್‌ಪಾತ್‌ಗೆ ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ಇನ್ನಿತರ ಅಭಿವೃದ್ದಿ ಕುರಿತು ಚರ್ಚಿಸಿ ನೀಲನಕ್ಷೆ ತಯಾರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳುವ ಮೂಲಕ ರಿಪ್ಪನ್‌ಪೇಟೆ ವಿನಾಯಕ ವೃತ್ತವನ್ನು ಸ್ಮಾಟ್ ಹೈಟೆಕ್ (ಮಾದರಿ) ವೃತ್ತವನ್ನಾಗಿ ಪರಿವರ್ತಿಸಲಾಗುವುದೆಂದು ಹೇಳಿದರು.
ಈಗಾಗಲೇ ಪದವಿ ಕಾಲೇಜ್ ಹತ್ತಿರ 20 ಮೀಟರ್ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದ್ದು ಉಳಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಇನ್ನೂ ವಿನಾಯಕ ವೃತ್ತದಿಂದ ನಾಲ್ಕು ಸಂಪರ್ಕ ರಾಜ್ಯ ಹೆದ್ದಾರಿಯ ಸಾಗರ-ತೀರ್ಥಹಳ್ಳಿ ರಸ್ತೆಯ ತಲಾ ಒಂದೊಂದು ಕಿ.ಮೀ.ರಸ್ತೆ ಅಗಲೀಕರಣ ಕಾಮಗಾರಿಗೆ 4.85 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಭರದಿಂದ ಸಾಗಿದೆ. ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನೂ ಆನಂದಪುರದಿಂದ ರಿಪ್ಪನ್‌ಪೇಟೆಯ ಆರ್.ಎಂ.ಸಿ.ಯಾರ್ಡ್ ಬಳಿಯ 9 ಕಿ.ಮೀ. ರಸ್ತೆ ಅಗಲಿಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ್ ಮುಗಿದು ಕಾಮಗಾರಿ ಭರದಿಂದ ಸಾಗಿದ್ದು ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವುದೆಂದು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಗಣಪತಿ ಗವಟೂರು, ಆಸಿಫ್‌ಭಾಷಾ, ಪ್ರಕಾಶ ಪಾಲೇಕರ್, ರವೀಂದ್ರ ಕೆರೆಹಳ್ಳಿ, ರಮೇಶ, ಮೋಹಿದ್ದೀನ್, ಖಲೀಲ್‌ಷರೀಪ್, ಕೆ.ದೇವರಾಜ್, ಲೇಖನ ಚಂದ್ರಶೇಖರ್, ಸೀತಾರಾಜಪ್ಪ, ಕೆ.ಸುಶೀಲ ಮೂಡಾಗ್ರೆ, ಗಣೇಶರಾವ್, ನರಸಿಂಹ, ಪಿಡಿಒ ನಾಗರಾಜ್, ಸಿಬ್ಬಂದಿ ನಾಗೇಶ್ ಮೋರೆ ಇನ್ನಿತರ ಹಲವರು ಹಾಜರಿದ್ದರು.