ರೋಟರಿ ಕ್ಲಬ್‌ ವತಿಯಿಂದ ಕೃಷಿಕರಿಗೆ ಪರಿಕರ ಹಾಗೂ ರೈನ್ ಕೋಟ್ ವಿತರಣೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ರೈತ ದೇಶದ ಬೆನ್ನೆಲುಬು ಅವರ ಪರಿಶ್ರಮವನ್ನು ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ರೈತ ಶ್ರಮವಿಲ್ಲದೆ ಯಾವ ದೇಶವೂ ಅಭಿವೃದ್ದಿ ಹೊಂದಲಾರದು. ಕೃಷಿಕರು ನಮ್ಮ ಅನ್ನದಾತರು ಅವರ ಶ್ರಮದ ಸಾಧನೆಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ನಿರಂತರವಾಗಿ ವಿವಿಧ ಸೇವಾ ಚಟುವಟಿಕೆಯನ್ನು ಹಮ್ಮಿಕೊಂಡು ಅವರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಎಂ.ಕೃಷ್ಣರಾಜ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ರೋಟರಿ ಕ್ಲಬ್‌ನವರು ಇಂದು ಬರುವೆ ಗ್ರಾಮದ ಗಣೇಶ ಎನ್.ಕಾಮತ್ ಜಮೀನಿನಲ್ಲಿ ನಡೆದ ರೈತಮಿತ್ರ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ರೈತರಿಗೆ ಕೃಷಿ ಪರಿಕರಗಳು ಮತ್ತು ಮಳೆಯ ರಕ್ಷಣೆಗೆ ರೈನ್‌ಕೋಟ್ ಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ 3182 ಜಿಲ್ಲಾ ವಲಯ 11 ರ ಅಸಿಸ್ಟೆಂಟ್ ಗವರ್ನರ್ ಎಂ.ಬಿ.ಲಕ್ಷ್ಮಣಗೌಡ ಭಾಗವಹಿಸಿ ಮಾತನಾಡಿ, ರೋಟರಿ ಸಂಸ್ಥೆ ಸಿರಿವಂತರ ಕ್ಲಬ್ ಅಲ್ಲ ಇದು ಸಮಾಜಕ್ಕಾಗಿ ದುಡಿಯುವವರ ವೇದಿಕೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಂಘಟನೆ ಗ್ರಾಮೀಣ ಜನಜೀವನದ ಉನ್ನತಿಗೆ ಸದಾ ಶ್ರಮಿಸುತ್ತಿದ್ದು ಕೃಷಿ ಕಾರ್ಮಿಕರ ಶ್ರಮಕ್ಕೆ ನಮ್ಮಿಂದಾದಷ್ಟು ಬೆಂಬಲ ನೀಡುವುದು ನಿಜವಾದ ಸೇವಾ ಮನೋಭಾವನೆ ಎಂದು ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ರವೀಂದ್ರ ಬಲ್ಲಾಳ್, ಜೆ.ರಾಧಾಕೃಷ್ನ, ಹೆಚ್.ಎಂ. ವರ್ತೇಶಪ್ಪಗೌಡ ಹುಗುಡಿ, ತಾನಾರಾಂ ಪಟೇಲ್, ಆರ್.ಗಣೇಶ್, ಶಿವಕುಮಾರ, ಸದಾನಂದ, ಸಬಾಸ್ಟಿನ್ ಮಾಥ್ಯೂಸ್, ರಾಮಚಂದ್ರ ಕೆರೆಹಳ್ಳಿ, ಅಮಿತ್ ಬಲ್ಲಾಳ್, ಸವಿತಾ ರಾಧಾಕೃಷ್ಣ ಇನ್ನಿತರ ಹಲವರು ಪಾಲ್ಗೊಂಡಿದ್ದರು.

Leave a Comment