ಸಕ್ರೆಬೈಲು ಆನೆ ಬಾಲಣ್ಣಗೆ ಗಾಯ – ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

Written by Koushik G K

Published on:

ಶಿವಮೊಗ್ಗ:ಶಿವಮೊಗ್ಗ ದಸರಾ ಆನೆ ಬಾಲಣ್ಣಗೆ ಕಿವಿಗೆ ಗಾಯ ಆದ ಘಟನೆ ಮಾಧ್ಯಮಗಳಲ್ಲಿ ಹೊರಬಿದ್ದ ನಂತರ, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಕ್ರೆಬೈಲು ಆನೆ ಶಿಬಿರದಲ್ಲಿ ಬಾಲಣ್ಣ ಸೇರಿದಂತೆ ನಾಲ್ಕು ಆನೆಗಳ ಅನಾರೋಗ್ಯದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಸಚಿವ ಖಂಡ್ರೆಯವರಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವಿಶೇಷ ಪತ್ರ ರವಾನಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆನೆ ಶಿಬಿರದ ನಿರ್ಲಕ್ಷ್ಯ ಪ್ರಶ್ನೆ – ವೈದ್ಯರ ಕೊರತೆಯ ಹಿನ್ನೆಲೆ ತನಿಖೆಗೆ ಸೂಚನೆ

ಸಚಿವರು ತಮ್ಮ ಪತ್ರದಲ್ಲಿ, ಆನೆಗೆ ಗಾಯವಾದ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಜೊತೆಗೆ ಬಾಲಣ್ಣನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಆನೆ ಶಿಬಿರಗಳಲ್ಲಿ ಹಾಗೂ ಮೃಗಾಲಯಗಳಲ್ಲಿ ಸಮರ್ಪಿತ ಪಶುವೈದ್ಯಾಧಿಕಾರಿಗಳನ್ನು ತಕ್ಷಣವೇ ನೇಮಿಸಿಕೊಳ್ಳುವಂತೆ ಅವರು ಸೂಚಿಸಿದ್ದಾರೆ. ಸಕ್ರೆಬೈಲು ಶಿಬಿರದಲ್ಲಿ ಡಾ. ವಿನಯ್ ಅವರು ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆನೆಗಳ ಆರೈಕೆ ಉತ್ತಮವಾಗಿದ್ದರೂ, ಅವರ ಬದಲಿಗೆ ಹೊಸ ವೈದ್ಯರನ್ನು ನೇಮಿಸದ ಹಿನ್ನಲೆಯಲ್ಲಿ ಶಿಬಿರದಲ್ಲಿ ವೈದ್ಯಕೀಯ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.

ಸಚಿವ ಖಂಡ್ರೆ ಈ ಕುರಿತು ಗಂಭೀರ ಚಿಂತನೆ ವ್ಯಕ್ತಪಡಿಸಿ, ಶಿಬಿರದ ಸ್ಥಿತಿಗತಿ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಇಲಾಖೆಗೆ ಕಠಿಣ ನಿರ್ದೇಶನ ನೀಡಿದ್ದಾರೆ.

ಶಿವಮೊಗ್ಗ ದಸರಾ ಆನೆಗಳ ಆರೈಕೆ, ಆಹಾರ ಮತ್ತು ಆರೋಗ್ಯದ ವಿಷಯಗಳು ಕಳೆದ ಕೆಲವು ವಾರಗಳಿಂದ ಪ್ರಶ್ನೆಗೊಳಗಾಗಿದ್ದು, ಬಾಲಣ್ಣನ ಗಾಯದ ಘಟನೆ ರಾಜ್ಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಸೇವೆ ಆರಂಭ

Leave a Comment