Sholarship:ಕೋಟಕ್ ಜೂನಿಯರ್ ಸ್ಕಾಲರ್ಶಿಪ್ 2025-26 ಇದು ಕೋಟಕ್ ಎಜುಕೇಷನ್ ಫೌಂಡೇಶನ್ ನ ಸಹಯೋಗದಲ್ಲಿ Buddy4Study ವೇದಿಕೆಯಲ್ಲಿ ಅನ್ವಯಿಸಬಹುದಾದ ಯೋಜನೆಯಾಗಿದೆ. ಈ ಯೋಜನೆಯು ವಿದ್ಯಾರ್ಥಿವೇತನ ವಂಚನೆ ತಡೆಗಟ್ಟುವಿಕೆಯಲ್ಲಿ ಯಶಸ್ವಿಯಾದ ಯೋಜನೆಯಾಗಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿವೇತನದ ಬಗ್ಗೆ ನಿಖರವಾದ ಮಾಹಿತಿ ಮತ್ತು ನಂಬಿಕೆ ಇರುವುದು ಕಷ್ಟಸಾಧ್ಯ. ಆದರೇ ಕೋಟಕ್ ಜೂನಿಯರ್ ವಿದ್ಯಾರ್ಥಿವೇತನವು ಭವಿಷ್ಯ ನಿರ್ಮಾಣಕ್ಕೆ ಆಶಾಕಿರಣವಾಗಿದೆ.
ಕೋಟಕ್ ಎಜುಕೇಶನ್ ಫೌಂಡೇಶನ್ ನ ಸಿಎಸ್ಆರ್ ವಿದ್ಯಾರ್ಥಿವೇತನವು 10 ನೇ ತರಗತಿಯಲ್ಲಿ 85% ಅಥವಾ ಹೆಚ್ಚು ಅಂಕ ಗಳಿಸಿದ ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಒದಗಿಸಲು ರೂಪುಗೊಂಡಿದೆ. ಕೋಟಕ್ ಜೂನಿಯರ್ ಸ್ಕಾಲರ್ ಶಿಪ್ ಪಡೆಯಲು ವಿದ್ಯಾರ್ಥಿಗಳು 2025ರ 10 ನೇ ತರಗತಿಯ ಎಸ್ಎಸ್ಎಲ್ಸಿ, ಸಿಬಿಎಸ್ಸಿ, ಐಸಿಎಸ್ಇ ಬೋರ್ಡ್ ಪರೀಕ್ಷೆಗಳಲ್ಲಿ ಸರಾಸರಿ 85% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
11ನೇ ಮತ್ತು 12ನೇ ತರಗತಿಗೆ ಓದುವ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು 3500 ರೂ. ವಿದ್ಯಾರ್ಥಿವೇತನ ಸಿಗುತ್ತದೆ. ಇದು 21 ತಿಂಗಳುಗಳ ಕಾಲ ರೂ. 73500 ಮೊತ್ತವಾಗುತ್ತದೆ. ಅರ್ಜಿಯನ್ನು ಸಲ್ಲಿಸಬೇಕಾದರೇ 10ನೇ ತರಗತಿಯ ಅಂಕಪಟ್ಟಿ, ವಾರ್ಷಿಕ ಆದಾಯ ಪ್ರಮಾಣಪತ್ರ, ಪೋಷಕರು ಮತ್ತು ವಿದ್ಯಾರ್ಥಿಯ ಆಧಾರ್ ಕಾರ್ಡ್, ಪೋಷಕರ ಪಾನ್ ಕಾರ್ಡ್, ಶಾಲೆ ಬಿಡುವ ಪ್ರಮಾಣ ಪತ್ರ, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಬ್ಯಾಂಕ್ ಖಾತೆ ವಿವರ, ಐಟಿ ರಿಟರ್ನ್ ಪ್ರತಿ ಅಥವಾ 26ಎಎಸ್ ಲಗತ್ತಿಸಬೇಕು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರು https://www̤.buddy4study̤.com/page/infosys-sţem-stars-scholarship ಭೇಟಿ ನೀಡಬೇಕು.
ಅನ್ವಯಿಸುವ ಬಟನ್ ಕ್ಲಿಕ್ ಮಾಡಿ, ನಿಮ್ಮ ನೊಂದಾಯಿತ ಐಡಿಯೊಂದಿಗೆ Buddy4Study ಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯ ಪುಟದಲ್ಲಿ ಇಳಿಯಿರಿ. Buddy4Studyನಲ್ಲಿ ನೊಂದಾಯಿಸದಿದ್ದರೆ, ನಿಮ್ಮ ಇಮೇಲ್/ಮೊಬೈಲ್/ ಜಿಮೈಲ್ ಖಾತೆಯೊಂದಿಗೆ Buddy4Study ನಲ್ಲಿ ನೊಂದಾಯಿಸಿ. ಈಗ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ಪ್ರೋಗ್ರಾಂ 2025-26 (Kotak junior Scholarship 2025-26) ಅರ್ಜಿ ನಮೂನೆಯ ಪುಟಕ್ಕೆ ಪುನಃ ನಿರ್ದೇಶಿಸುತ್ತದೆ. ಅಪ್ಲಿಕೇಶನ್ ಪ್ರಾರಂಭಿಸಿ ಬಟನ್ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ ಮತ್ತು ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ, ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಂಡು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, 2025ಆಗಿದೆ.
Read More
ರಾಜ್ಯದ 5.58 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಆಗಿದೆ ಜಮೆ, ನಿಮಗೂ ಬಂದಿದ್ಯಾ? ಈ ರೀತಿ ಚೆಕ್ ಮಾಡಿ
FASTag ವಾರ್ಷಿಕ ಪಾಸ್ : ಏನಿದು? ಪ್ರಸ್ತುತ ಬಳಕೆದಾರರ ಮೇಲೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.