ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ₹8644 ಕೋಟಿ ಬಿಡುಗಡೆ – ಬೇಳೂರು ಗೋಪಾಲಕೃಷ್ಣ

Written by Koushik G K

Updated on:

Sharavati pump storage -ರಾಜ್ಯದ ಮಹತ್ವಾಕಾಂಕ್ಷೆಯ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸರ್ಕಾರವು ₹8644 ಕೋಟಿ ಬಿಡುಗಡೆಯನ್ನಾಗಿಸಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ರಾಜ್ಯದ ವಿದ್ಯುತ್ ಕೊರತೆಗೆ ಶಾಶ್ವತ ಪರಿಹಾರ ನೀಡಲಿದ್ದು, ಯೋಜನೆಯ ಸ್ಪಷ್ಟತೆ ಹಾಗೂ ಅಗತ್ಯತೆಯನ್ನು ಬಹಿರಂಗಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಶಾಸಕ ಗೋಪಾಲಕೃಷ್ಣ ಅವರು, “ಶರಾವತಿ ನದಿಯ ಪಂಪ್ ಸ್ಟೋರೇಜ್ ಯೋಜನೆ ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಯೋಜನೆಗಳಲ್ಲಿ ಒಂದು. ಈ ಯೋಜನೆಯು ₹8644 ಕೋಟಿ ವೆಚ್ಚದಲ್ಲಿ ರೂಪುಗೊಳ್ಳಲಿದೆ ಹಾಗೂ ಇದರ ಮೂಲಕ ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ,” ಎಂದು ವಿವರಿಸಿದರು.

ಪಂಪ್ಡ್ ಸ್ಟೋರೇಜ್ ಯೋಜನೆಯ ತಾಂತ್ರಿಕತೆ

ಈ ಯೋಜನೆಯು ನೀರನ್ನು ಮೇಲ್ಮಟ್ಟದ ಜಲಾಶಯದಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ಅದನ್ನು ಕೆಳಮಟ್ಟದ ಜಲಾಶಯಕ್ಕೆ ಹರಿಸು ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ. ಈ ಪ್ರಕ್ರಿಯೆ ಮೂಲಕ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಬಹುದು ಎಂದು ಶಾಸಕರು ಹೇಳಿದರು.

ಪರಿಸರ ಮತ್ತು ರೈತರಿಗೆ ಪ್ರಭಾವ

ಈ ಯೋಜನೆಯಿಂದ ಅಲ್ಪ ಪ್ರಮಾಣದ ಅರಣ್ಯ ಪ್ರದೇಶಹಾಗು ಕಂದಾಯ ಭೂಮಿ ಬಳಕೆಯಾಗಲಿದೆ . ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೃಹತ್ ಸುರಂಗ ನಿರ್ಮಾಣ ನಡೆಯಲಿದೆ. ಆದರೆ ಇದರಿಂದ ರೈತರ ಭೂಮಿಗೆ ಹೆಚ್ಚು ಹಾನಿಯಾಗದಂತೆ ಯೋಜನೆಯು ರೂಪುಗೊಳ್ಳಲಿದೆ ಎಂದು ಶಾಸಕರು ಭರವಸೆ ನೀಡಿದರು. ಭೂಮಿ ನೀಡುವ ರೈತರಿಗೆ ಸರ್ಕಾರವು ನೌಕರಿಯ ಅವಕಾಶವನ್ನು ಕಲ್ಪಿಸುತ್ತದೆ ಎಂದರು.

ಅಭಿವೃದ್ದಿಯ ಭರವಸೆ

“ಜೋಗ ಜಲಪಾತ ಮತ್ತು ಹಸಿರುಮಕ್ಕಿ ಸೇತುವೆಗೆ ಈಗಾಗಲೇ ಅನುದಾನ ನೀಡಲಾಗಿದೆ. ಗ್ಯಾರಂಟಿ ಯೋಜನೆ ಅಡಿಯಲ್ಲಿ ರಾಜ್ಯದ ಅಭಿವೃದ್ದಿಗೆ ಹಣ ನೀಡಿಲ್ಲ ಎಂದು ಹೇಳೋದು ಮೂರ್ಖತನ,” ಎಂದು ಶಾಸಕರು ತೀವ್ರವಾಗಿ ಪ್ರತಿಕ್ರಿಯಿಸಿದರು. “ಈ ಯೋಜನೆ ಆದಷ್ಟು ಬೇಗ ಮುಗಿಯಬೇಕು. ಇದು ನಮ್ಮ ತಾಕತ್ತಿನ ನಿಜವಾದ ನಿದರ್ಶನ,” ಎಂದರು.

ಶಾಸಕರು ನಿರ್ದಿಷ್ಟವಾಗಿ ಕೆಲವರ ವಿರೋಧದ ಕುರಿತು ಪ್ರತಿಕ್ರಿಯಿಸುತ್ತಾ, “ಹರತಾಳು ಹಾಲಪ್ಪನಂತಹ ಕೆಲವರು ಮಾತ್ರ ವಿರೋಧಿಸುತ್ತಿದ್ದಾರೆ. ಇಂತಹ ಮಹತ್ವದ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ರಾಜ್ಯದ ಅಭಿವೃದ್ಧಿಗೆ ಅಡೆತಡೆ ಯಾಗಬಹುದು,” ಎಂದು ಹೇಳಿದರು.

Watch Video For More Info

Leave a Comment