SHIVAMOGGA | ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಗೀತಾ ಶಿವರಾಜ್‌ಕುಮಾರ್ ರವರನ್ನು 2,43,715 ಮತಗಳ ಭಾರಿ ಅಂತರದಿಂದ ಮಣಿಸಿದ್ದಾರೆ. ಇನ್ನೂ ಬಿಜೆಪಿ ವಿರುದ್ದ ಬಂಡಾಯ ನಿಂತಿದ್ದ ಕೆ.ಎಸ್.ಈಶ್ವರಪ್ಪ ಕೇವಲ 30 ಸಾವಿರ ಮತ ಗಳಿಸುವ ಮೂಲಕ ಠೇವಣಿ ಕಳೆದುಕೊಂಡಿದ್ದು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬರೋಬ್ಬರಿ 23 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿ.ವೈ. ರಾಘವೇಂದ್ರ ಭರ್ಜರಿಯಾಗಿ ಜಯಗಳಿಸಿದ್ದಾರೆ.
ಯಾರಿಗೆ ಎಷ್ಟು ಮತ ?
- ಬಿ.ವೈ.ರಾಘವೇಂದ್ರ : 778721
- ಗೀತಾ ಶಿವರಾಜ್‌ಕುಮಾರ್ : 5,35,006
- ಕೆ.ಎಸ್.ಈಶ್ವರಪ್ಪ : 30,050
- ಬಂಧಿ : 7266
- ಎನ್. ರವಿಕುಮಾರ್ : 8488
- ಪೂಜಾ ಎನ್.ಅಣ್ಣಯ್ಯ : 3457
- ಎ.ಡಿ. ಶಿವಪ್ಪ : 2779
- ಎನ್.ವಿ.ನವೀನ್‌ಕುಮಾರ್ : 1993
- ಅರುಣಾ ಕಾನಹಳ್ಳಿ : 1478
- ಇ.ಎಚ್. ನಾಯ್ಕ್ : 954
- ಜಾನ್ ಬೆನ್ನಿ : 867
- ಗಣೇಶ್ ಬೆಳ್ಳಿ : 747
- ಡಿ.ಎಸ್.ಈಶ್ವರಪ್ಪ : 695
- ಕುಣಜೆ ಮಂಜುನಾಥಗೌಡ : 683
- ಹೆಚ್.ಕೆ.ಪ್ರಭು : 617
- ಶಿವರುದ್ರಯ್ಯ ಸ್ವಾಮಿ : 599
- ಇಮ್ತಿಯಾಜ್ ಎ.ಅತ್ತಾರ್ : 442
- ಮೊಹಮ್ಮದ್ ಯೂಸಫ್‌ಖಾನ್ : 404
- ಜಿ.ಜಯದೇವ : 368
- ಹೆಚ್.ಸಿ.ಚಂದ್ರಶೇಖರ್ : 357
- ಶ್ರೀಪತಿ ಭಟ್ : 344
- ಸಂದೇಶ ಶೆಟ್ಟಿ : 293
- ಹೆಚ್.ಸುರೇಶ್ ಪೂಜಾರಿ : 220
- ನೋಟಾ : 4332
- ಒಟ್ಟು ಚಲಾವಣೆಯಾದ ಮತಗಳು : 1372892