ಅಥ್ಲೇಟಿಕ್ ಕ್ರೀಡಾಕೂಟ-2025: ಶಿವಮೊಗ್ಗದ ಕ್ರೀಡಾಪಟುಗಳ ಮಿಂಚು

Written by Koushik G K

Published on:

ಉಡುಪಿ ಜಿಲ್ಲೆಯಲ್ಲಿ ನಡೆದ 23 ವರ್ಷ ವಯೋಮಿತಿಯೊಳಗಿನ ಕರ್ನಾಟಕ ರಾಜ್ಯ ಕಿರಿಯರ ಅಥ್ಲೇಟಿಕ್ ಕ್ರೀಡಾಕೂಟ-2025ರಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಜಿಲ್ಲೆಯ ಕೀರ್ತಿಯನ್ನು ಮತ್ತೊಮ್ಮೆ ಎತ್ತಿದ್ದಾರೆ. ಒಟ್ಟು 12 ಮಂದಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ತಮಗೆ ತಕ್ಕ ಕೀರ್ತಿಯನ್ನೇ ಗಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸಾಧನೆಯ ವಿವರಗಳು

  • ಎತ್ತರ ಜಿಗಿತ: ಅನ್ವಿತ ಎಂ.ಆರ್. — ಪ್ರಥಮ, ಆರೋನ್ ಎನ್.ಬಿ. — ದ್ವಿತೀಯ, ಸುದೀಪ್ — ಪ್ರಥಮ ಸ್ಥಾನ ಹಾಗೂ ಕೂಟ ದಾಖಲೆ.
  • 600 ಮೀ ಓಟ: ಶರತ್ ಕೆ.ಜೆ. — ಪ್ರಥಮ ಸ್ಥಾನ, “ಉತ್ತಮ ಅಥ್ಲೆಟಿಕ್ ಕ್ರೀಡಾಪಟು” ಪ್ರಶಸ್ತಿ.
  • 60 ಮೀ ಓಟ: ಸಂಜಯ್ ಎಸ್.ಹೆಚ್. — ಪ್ರಥಮ, ಸಚಿನ್ ಜಾಧವ್ — ದ್ವಿತೀಯ.
  • 80 ಮೀ ಹರ್ಡಲ್ಸ್: ಸಿರಿ ಕೆ.ಜೆ. — ದ್ವಿತೀಯ.
  • ಕಿಡ್ಸ್ ಜಾವಲಿನ್: ಪದ್ಮಾವತಿ — ಪ್ರಥಮ, ಪ್ರೇಕ್ಷಾ ಎಲ್.ಗೌಡ — ದ್ವಿತೀಯ, ಅಮಿತ್ — ದ್ವಿತೀಯ.
  • 100 ಮೀ ಓಟ: ಗೌತಮ್ — ತೃತೀಯ.
  • ಟ್ರಯಾಥ್‌ಲಾನ್: ಪದ್ಮಾವತಿ — ತೃತೀಯ ಸ್ಥಾನ.
📢 Stay Updated! Join our WhatsApp Channel Now →

ಈ ಸಾಧನೆಗಳಿಂದ ಶಿವಮೊಗ್ಗ ಜಿಲ್ಲೆಯ ಅಥ್ಲೇಟಿಕ್ಸ್ ಪ್ರತಿಭೆ ರಾಜ್ಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ.

ತರಬೇತಿಯ ಹಿಂದೆ ಬಲ

ಈ ಕ್ರೀಡಾಪಟುಗಳಿಗೆ ಶಿವಮೊಗ್ಗದ ಕ್ರೀಡಾ ವಸತಿ ನಿಲಯದಲ್ಲಿ ಅಥ್ಲೇಟಿಕ್ ತರಬೇತುದಾರರಾದ ಬಾಳಪ್ಪ ಮಾನೆ ದಿನನಿತ್ಯದ ಶ್ರಮದಾಯಕ ತರಬೇತಿ ನೀಡಿದ್ದಾರೆ. ಅವರ ಮಾರ್ಗದರ್ಶನವೇ ಈ ಸಾಧನೆಯ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ಶುಭ ಹಾರೈಕೆ

ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖ್ಯಾ ನಾಯ್ಕ್, ಸಿಬ್ಬಂದಿವರ್ಗದವರು ಮತ್ತು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಉದಯಕುಮಾರ್ ವಿಜೇತರಾದ ಕ್ರೀಡಾಪಟುಗಳನ್ನು ಅಭಿನಂದಿಸಿ, ಭವಿಷ್ಯದಲ್ಲೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಹಾರೈಸಿದ್ದಾರೆ.

ಮುಂದುವರೆದ ಭಾರಿ ಮಳೆ ; ಶಿವಮೊಗ್ಗ ಜಿಲ್ಲೆಯ ಈ ತಾಲೂಕಿನ ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಣೆ

Leave a Comment