ಶಿವಮೊಗ್ಗ ಸುದ್ದಿ

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆದರಿದ ಅಂಬಾರಿ ಆನೆ; ವಾಹನಗಳಿಗೆ ಹಾನಿ, ಪಾಲಿಕೆ ಆಯುಕ್ತರು ಏನಂದ್ರು?

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಹಿಂದಕ್ಕೆ ಓಡಿದ ಪರಿಣಾಮ ಕೆಲ ವಾಹನಗಳು ಮತ್ತು ಮಂಟಪಕ್ಕೆ ಹಾನಿಯಾಗಿದೆ. ಆದರೆ ಉತ್ಸವ ಮೂರ್ತಿ ಹಾಗೂ ಆಭರಣಗಳು ಸುರಕ್ಷಿತವಾಗಿವೆ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆದರಿದ ಅಂಬಾರಿ ಆನೆ; ವಾಹನಗಳಿಗೆ ಹಾನಿ, ಆಭರಣ ಸುರಕ್ಷಿತ ಎಂದ ಪಾಲಿಕೆ ಆಯುಕ್ತ – 4ee4dc7e aa43 4495 969d ead…

ಶಿವಮೊಗ್ಗ: ವಿಜಯದಶಮಿ ಅಂಗವಾಗಿ ನಡೆದ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಆನೆ ಏಕಾಏಕಿ ಬೆದರಿ ಹಿಂದಕ್ಕೆ ಓಡಿದ ಪರಿಣಾಮ ಕೆಲ ವಾಹನಗಳು ಜಖಂಗೊಂಡು, ಮಂಟಪಕ್ಕೂ ಹಾನಿಯಾಗಿದೆ. ಆದರೆ ಉತ್ಸವ ಮೂರ್ತಿ ಹಾಗೂ ಆಭರಣಗಳು ಸುರಕ್ಷಿತವಾಗಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಕಳೆದ ಹಲವು ವರ್ಷಗಳಿಂದ ವಿಜಯದಶಮಿಯಂದು ಆನೆಗಳೊಂದಿಗೆ ಅಂಬಾರಿ ಮೆರವಣಿಗೆ ನಡೆಸುವ ಸಂಪ್ರದಾಯವಿದೆ. ಈ ಬಾರಿಯ ಮೆರವಣಿಗೆಯಲ್ಲಿ ಬಹುದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಭಾಗವಹಿಸಿದ್ದವು.

ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಜನಜಂಗುಳಿ ಹೆಚ್ಚಾಗಿ ಮುಂದೆ ಬಂದ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಹಿಂದಕ್ಕೆ ಓಡಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವೇಳೆ ಒಂದೆರಡು ವಾಹನಗಳು ಜಖಂಗೊಂಡಿದ್ದು, ಮಂಟಪಕ್ಕೂ ಹಾನಿಯಾಗಿದೆ. ಪರಿಸ್ಥಿತಿ ಗಮನಿಸಿದ ಅಧಿಕಾರಿಗಳು ತಕ್ಷಣ ಉತ್ಸವ ಮೂರ್ತಿ ಹಾಗೂ ಆಭರಣಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಆಭರಣ ಕಳೆದುಹೋಗಿಲ್ಲ

ಘಟನೆ ಬಳಿಕ ಆಭರಣಗಳ ಸುರಕ್ಷತೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಆಯುಕ್ತ ಮಾಯಣ್ಣಗೌಡ, ಯಾವುದೇ ಆಭರಣ ಕಳೆದುಹೋಗಿಲ್ಲ ಎಂದು ತಿಳಿಸಿದ್ದಾರೆ.

ಆಭರಣಗಳ ಸುರಕ್ಷತೆಗಾಗಿ ಪ್ರತ್ಯೇಕ ತಂಡವನ್ನು ನಿಯೋಜಿಸಲಾಗಿತ್ತು. ಆನೆಗಳಿಗೆ ಅರಣ್ಯ ಇಲಾಖೆಯ ನಿಯಮಾವಳಿ ಪ್ರಕಾರ ತಾಲೀಮು ನೀಡಲಾಗಿತ್ತು ಎಂದೂ ಅವರು ಹೇಳಿದ್ದಾರೆ.

ಟ್ರ್ಯಾಕ್ಟರ್ ಮೂಲಕ ಕಾರ್ಯಕ್ರಮ ಪೂರ್ಣ

ಆನೆ ಬೆದರಿದ ಬಳಿಕ ಬೇರೆ ಉತ್ಸವ ಮೂರ್ತಿಯನ್ನು ಬಳಸಿ, ಟ್ರ್ಯಾಕ್ಟರ್ ಮೂಲಕ ‘ಬನ್ನಿ ಮುಡಿಯುವ’ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ.

ಹಾನಿಗೊಳಗಾದ ಮಂಟಪವನ್ನು ಶೀಘ್ರ ಪುನರ್‌ನಿರ್ಮಿಸಲಾಗುವುದು. ಘಟನೆಯಲ್ಲಿ ಹಾನಿಯಾದ ಸಾರ್ವಜನಿಕರ ವಾಹನಗಳು ಹಾಗೂ ಮನೆಗಳಿಗೆ ವಿಮೆ ಮೂಲಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಯಣ್ಣಗೌಡ ತಿಳಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

error: Content is protected !!