ಸ್ಮಶಾನದಲ್ಲಿ ಕಂಠಪೂರ್ತಿ ಎಣ್ಣೆ ಕುಡಿದ ಇಬ್ಬರು ಸ್ನೇಹಿತರು, ಓರ್ವನನ್ನು ಕೊಚ್ಚಿ ಕೊಂದಿದ್ಯಾಕೆ ?

Written by Mahesha Hindlemane

Published on:

SHIVAMOGGA | ಮಾರಕಾಸ್ತ್ರಗಳಿಂದ (Weapons) ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ (Murder) ಘಟನೆ ಶಿವಮೊಗ್ಗದ ಆಯನೂರು ಗೇಟ್ ಬಳಿ ಸ್ಮಶಾನದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಹೇಗಾಯ್ತು ಘಟನೆ ?

ನಾಲ್ಕೈದು ಕಾಡುಕೋಣಗಳ ಕಳೇಬರ ಪತ್ತೆ ! ದುಷ್ಕರ್ಮಿಗಳು ಬೇಟೆಯಾಡಿರುವ ಶಂಕೆ

ಜೆ.ಪಿ ನಗರ ನಿವಾಸಿ ರಾಜುನಾಯ್ಕ್ ಹಾಗೂ ವಿಕ್ರಮ್ ಇಬ್ಬರೂ ಸ್ನೇಹಿತರು ಕಂಠಪೂರ್ತಿ ಮದ್ಯ ಸೇವಿಸಿದ್ದು, ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ವಿಕ್ರಮ್ ಎಂಬಾತನು ರಾಜುನಾಯ್ಕ್ (30) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ.

ಕುಡಿದ ಮತ್ತಿನಲ್ಲಿ ವೈಯಕ್ತಿಕ ವಿಚಾರ ಪ್ರಸ್ತಾಪವಾಗಿ ಇಬ್ಬರ ನಡುವೆ ಜಗಳ ಶುರುವಾಗಿದ್ದು ನಂತರ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಆರೋಪಿ ವಿಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More :ನಾಲ್ಕೈದು ಕಾಡುಕೋಣಗಳ ಕಳೇಬರ ಪತ್ತೆ ! ದುಷ್ಕರ್ಮಿಗಳು ಬೇಟೆಯಾಡಿರುವ ಶಂಕೆ

Leave a Comment