ಮಾರುತಿಪುರ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ದೀಪಿಕಾ ಕೃಷ್ಣ ಆಯ್ಕೆ

0 40

ಹೊಸನಗರ: ಮಾರುತಿಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ದೀಪಿಕಾ ಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಶಂಕರಶೆಟ್ಟಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪಂಚಾಯಿತಿ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಶಾಲಿಯಾಗಿದ್ದಾರೆ.

ಒಟ್ಟು 16 ಸದಸ್ಯ ಬಲದ ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದೀಪಿಕಾ ಕೃಷ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಂಕರಶೆಟ್ಟಿ ಪರವಾಗಿ ತಲಾ 10 ಮತಗಳು ಬಂದುವು.


ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಜಿ.ಚಂದ್ರಮೌಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧಿಕಾರ ಹಿಡಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಇನ್ನಷ್ಟು ಸಂಘಟನೆಯಲ್ಲಿ ತೊಡಗಿಲಿದೆ. ಗೆಲುವು ಸಾಧಿಸಿ ಅಧಿಕಾರಿ ಹಿಡಿದ ಪಂಚಾಯಿತಿಗಳಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ‍್ಯ ಆಗಲಿದೆ. ಪಕ್ಷಾತೀತವಾಗಿ ದಕ್ಷ ಆಡಳಿತ ನೀಡಲಿದ್ದಾರೆ ಎಂದರು.


ಈ ವೇಳೆ ಸದಸ್ಯ ಎಚ್.ಬಿ.ಚಿದಂಬರ, ಇಂದ್ರೇಶ್, ನಾರಾಯಣಪ್ಪ, ಅವಿನಾಶ, ಪ್ರಕಾಶ್, ಜಯಮ್ಮ, ಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಣಪತಿ ಗೌಡ, ಎಸ್.ಕೆ.ರಾಜು, ಸಿದ್ದವೀರಪ್ಪಗೌಡ, ಸಾದಿಕ್ ಅಲಿ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!