ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ತ್ರಯೋದಶ ಪ್ರದರ್ಶನಿ ಸಂಭ್ರಮ‌ ; ಮಂಜುನಾಥ್ ಬ್ಯಾಣದ

0 37

ಹೊಸನಗರ: ತಾಲ್ಲೂಕಿನ ಬಟ್ಟೆಮಲ್ಲಪ್ಪದಲ್ಲಿ ಫೆ. 23 ಗುರುವಾರ ಬೃಹತ್ ಆರೋಗ್ಯ ಮೇಳ ಹಾಗೂ 26 ಭಾನುವಾರದಿಂದ 28 ಮಂಗಳವಾರದವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಸನ್ಮಾನ, ಸಾಂಸ್ಕೃತೀಕ ಕಾರ್ಯಕ್ರಮ ಯಕ್ಷಗಾನ ಶಾಲೆಯ ಗುರುಕುಲದ ಮಕ್ಕಳಿಂದ ಕಾರ್ಯಕ್ರಮಗಳು ಹಾಗೂ ಪೋಷಕ ವರ್ಗದವರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗುರುಕುಲದ ಸ್ಥಾಪಕ ಮಂಜುನಾಥ್ ಬ್ಯಾಣದ ಹೇಳಿದರು.


ಹೊಸನಗರದ ಶೀತಲ್ ಹೋಟೆಲ್ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಬಟ್ಟೆಮಲ್ಲಪ್ಪದಲ್ಲಿ ವ್ಯಾಸ ಮಹರ್ಷಿ ಗುರುಕುಲ ಸ್ಥಾಪಿಸಿ 13 ವರ್ಷ ಕಳೆದಿದೆ. ಕಳೆದ ಎರಡು ವರ್ಷಗಳಿಂದ ಕೊರೊನದಿಂದ ದಶಮಾನೋತ್ಸವ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ ಆದ್ದರಿಂದ ಈ ವರ್ಷ ದಶಮಾನೋತ್ಸವದ ಬದಲಿಗೆ ತ್ರಯೋದಶ ಪ್ರದರ್ಶನಿ ಎಂದು ಹೆಸರನ್ನು ನಾಮಕರಣ ಮಾಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.


ಫೆ. 22 ರಂದು ಬೆಳಿಗ್ಗೆ 11ಗಂಟೆಯಿಂದ ಮಣಿಪಾಲ ವೈದ್ಯಾಧಿಕಾರಿಗಳ ತಂಡ ಸುಮಾರು ಮಹಿಳ ವೈದ್ಯರು ಸೇರಿ 25 ಜನ ಡಾಕ್ಟರ್‌ಗಳು ಆಗಮಿಸಲಿದ್ದು ಇವರು ಪುರುಷರು ಹಾಗೂ ಮಹಿಳೆಯರ ದೇಹದಲ್ಲಿರುವ ಪ್ರತಿಯೊಂದು ಕಾಯಿಲೆಯನ್ನು ಪರೀಕ್ಷಿಸಲಿದ್ದು ಅದಕ್ಕೆ ಸೂಕ್ತ ಪರಿಹಾರವನ್ನು ನೀಡಲಿದ್ದಾರೆ. ಇದು 25 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿಯೇ ಇಂಥಹ ಆರೋಗ್ಯ ಮೇಳ ರೀತಿ ನಡೆದಿರಲಿಕ್ಕಿಲ್ಲ ಎಂದರು.


ನಮ್ಮ ಗುರುಕುಲವೂ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೇ ಅನ್ನದಾಸೋಹ, ಶಿಕ್ಷಣ ಆರೋಗ್ಯ ಸಾಂಸ್ಕೃತಿಕ ಚಟುವಟಿಕೆಗೂ ಹೆಸರು ಪಡೆದಿದ್ದು ಈ ವರ್ಷ ವಿಶೇಷವಾಗಿ ಹಿಂದು ಧರ್ಮಗುರುಗಳನ್ನು ಮುಸ್ಲಿಂ ಧರ್ಮಗುರುಗಳನ್ನು ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳ ಮೂಲಕ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾವು ಪ್ರತಿ ವರ್ಷ ತಾಲ್ಲೂಕಿನಲ್ಲಿ ಕೀರ್ತಿ ತಂದಿರುವ ಹೆಸರು ಮಾಡಿರುವ ವ್ಯಕ್ತಿಯನ್ನು ಗುರುತಿಸುತ್ತಿದ್ದು ಈ ವರ್ಷ ಮಾರುತಿಪುರ ಶಾಲೆಯ ಮುಖ್ಯ ಶಿಕ್ಷಕ ಕೆ ರಾಮಶೆಟ್ಟಿಯವರನ್ನು ಸನ್ಮಾನಸುತ್ತಿದ್ದೇವೆ ಎಂದರು.


ನಾವು ಮಕ್ಕಳನ್ನು ಗುರುಕುಲಕ್ಕೆ ಸೇರಿಸಿಕೊಳ್ಳುವಾಗ ಅರ್ಥಿಕವಾಗಿ ಹಿಂದುಳಿದವರು ಅಂಗವಿಕಲರು, ತಂದೆ-ತಾಯಿ ಇಲ್ಲದವರನ್ನು ಕುರುಕುಲಕ್ಕೆ ಸೇರಿಸಿಕೊಂಡು ಅವರಿಗೆ ವಿದ್ಯೆಯ ಜೊತೆಗೆ ಭರತನಾಟ್ಯ, ಕರಾಟೆ ಸಾಂಸ್ಕೃತೀಕ ಕಾರ್ಯಕ್ರಮಗಳನ್ನು ನುರಿತ ಶಿಕ್ಷಕರಿಂದ ಕೊಡಿಸುವ ಕಾರ್ಯಕ್ರಮ ನಡೆಯುತ್ತಿದೆ ಎಲ್ಲ ಕಾರ್ಯಕ್ರಮಗಳಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಅನಾರೋಗ್ಯ ಪೀಡಿತರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಜೊತೆಗೆ ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಸಿಕೊಡಬೇಕೆಂದು ಕೇಳಿಕೊಂಡರು.


ಈ ಸಂದರ್ಭದಲ್ಲಿ ಗುರುಕುಲದ ಮಾರ್ಗದರ್ಶಕರಾದ ಮಾಜಿ ಸೈನಿಕ ಕೆ.ಪಿ.ಕೃಷ್ಣಮೂರ್ತಿ ಉದಯಕುಮಾರ್ ಶೆಟ್ಟಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!