ರೈತರೊಂದಿಗೆ ಚರ್ಚಿಸಲು ‌ವಿವಿಧ ಇಲಾಖೆಯ ಮುಖ್ಯಾಧಿಕಾರಿಗಳ ಭೇಟಿಗೆ ದಿನಾಂಕ ಗುರುತು ಮಾಡಿ ; ರೈತ ಸಂಘದಿಂದ ಮನವಿ

ಹೊಸನಗರ: ತಾಲ್ಲೂಕಿನ ಕೆಲವು ಅಧಿಕಾರಿಗಳು ರೈತರಿಗೆ ಸಿಗುತ್ತಿಲ್ಲ ಹೊಸನಗರ ತಾಲ್ಲೂಕಿನಲ್ಲಿ ರೈತರ ಸಮಸ್ಯೆ ಬಹಳಷ್ಟಿದ್ದು ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ರೈತರ ಕಷ್ಟ ಕೇಳುವವರು ಯಾರು ನಮ್ಮ ತಾಲ್ಲೂಕಿನಲಿಲ್ಲ ಎಂದು ಹೊಸನಗರ ತಾಲ್ಲೂಕು ರೈತ ಸಂಘದ ಜಿ.ವಿ ರವೀಂದ್ರರವರ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರಿಗೆ ಮನವಿ ಸಲ್ಲಿಸಿದರು.

ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ನಮ್ಮ ತಾಲ್ಲೂಕಿನಲ್ಲಿ ರೈತರ ಹಲವಾರು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳನ್ನು ತಾಲ್ಲೂಕು ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳಾದ ತಾವು ರೈತರೊಂದಿಗೆ ಚರ್ಚಿಸಲು ಮೇಲ್ಕಂಡ ಇಲಾಖೆಯವರೊಂದಿಗೆ ಸೂಕ್ತ ಸಮಯ ಹಾಗೂ ದಿನಾಂಕವನ್ನು ನಿಗದಿ ಪಡಿಸಿ ಎಲ್ಲಾ ಅಧಿಕಾರಿಗಳನ್ನು ಕರೆಯಬೇಕೆಂದು ಮನವಿ ಮಾಡಿದರು.


ಮನವಿ ಪತ್ರದಲ್ಲಿ, ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಮಂಗಗಳ ಹಾಗೂ ಕಾಡು ಕೋಣಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಣಕ್ಕಾಗಿ ಚರ್ಚಿಸಲು ಅವಕಾಶ ಕೋರಿದರು‌. ಕೆಲವು ರಸ್ತೆಗಳಿಗೆ ಸೇತುವೆ ಸಂಪರ್ಕ ಕಲ್ಪಿಸಿದ್ದು ಸೇತುವೆಯ ಮೇಲೆ ಸುಗಮವಾಗಿ ಸಂಚರಿಸಲು ಸೇತುವೆಯ ಆಚೆ-ಈಚೆ ಮಣ್ಣನ್ನು ಎತ್ತರಿಸಿ ಪಿಚಿಂಗ್ ಕಟ್ಟದೇ ರೈತರ ಭೂಮಿ ಹಾಳಾಗುತ್ತಿದ್ದು ಹಾಗು ತಿರುಗಾಡಲು ತೊಂದರೆಯಾಗುತ್ತಿದೆ. ಜಿಲ್ಲಾ ಪಂಚಾಯಿತಿ ಕಾಮಗಾರಿಗಳ ಬಗ್ಗೆ ಕಾಮಗಾರಿಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸದೇ ಕಳಪೆಗೊಳಿಸುತ್ತಿದೆ. ತಾಲ್ಲೂಕಿನ ಹೋಬಳಿ ಮತ್ತು ಗ್ರಾಮಂತರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲದೇ ಉಪಯುಕ್ತ ಔಷಧಿಗಳು ದೊರೆಯದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪಶುವೈದ್ಯರನ್ನಾಗಲಿ ಅಥವಾ ಇನ್ಸ್‌ಪೆಕ್ಟರ್ ಆಗಲಿ ಪಶು ಆಸ್ಪತ್ರೆಗೆ ನೇಮಕ ಮಾಡದೇ ಈಗಾಗಲೆ ಹಲವಾರು ರೋಗಗಳಿಂದ ಜಾನುವಾರು ಹಾಗೂ ರೈತರ ಸಾಕು ಪ್ರಾಣಿಗಳು ಮರಣ ಹೊಂದುತ್ತಿವೆ ತಕ್ಷಣ ಅಧಿಕಾರಿಗಳ ಸಭೆ ನಡೆಸಬೇಕೆಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಅಮ್ಮುಗಡ್ಡೆ ಭಾಸ್ಕರ್, ಮಾಸ್ತಿಕಟ್ಟೆ ಲೋಕಪ್ಪ, ಅಬ್ದುಲ್ ರೆಹಮಾನ್, ರಫೀರ್, ದಿನೇಶ್, ಮಂಜುನಾಥ್, ಆದರ್ಶ, ಈಶ್ವರ್, ಸಂತೋಷ್, ನವೀನ್, ಪ್ರತಿಕ್, ಸುಪ್ರೀತ್, ಆಕಾಶ್ ಇನ್ನೂ ಮುಂತಾದವರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!