ಹೊಸನಗರ: ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್‌ರವರ ಆದೇಶದ ಮೇರೆಗೆ ಸಬ್‌ಇನ್ಸ್ಪೇಕ್ಟರ್ ನೀಲರಾಜ್ ನರಲಾರ ಮತ್ತು ಪೊಲೀಸ್ ಸಿಬ್ಬಂದಿಗಳು ಅಕ್ರಮವಾಗಿ 2ಹೋರಿಗಳ ಸಾಗಿಸುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಎರಡು ಹೋರಿಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ತಮ್ಮ ವಾಹನದಲ್ಲಿ ತುಂಬಿಕೊಂಡು ಬಟ್ಟೆಮಲ್ಲಪ್ಪ – ಆನಂದಪುರ ಮಾರ್ಗವಾಗಿ ಹೋಗುವುದಾಗಿ ಖಚಿತ ವರ್ತಮಾನದ ಮೇರೆಗೆ ಮಾಹಿತಿ ಬಂದ ತಕ್ಷಣ ಬೆಳಿಗ್ಗೆ 8 ಗಂಟೆಗೆ ಹೊಸನಗರ ತಾಲ್ಲೂಕು ಹರಿದ್ರಾವತಿಯ ಕೆರೆಹಳ್ಳಿ ಗ್ರಾಮದ ಪುಟ್ಟಸ್ವಾಮಿರವರ ಮನೆಯ ಮುಂದಿನ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದ ಜಿ.ಎ 03 0935ರ ಹೀರೋ ಸ್ಲೆಂಡರ್ ಪ್ಲಸ್ ಬೈಕ್ ಹಾಗೂ ಕೆಎ 29ಎ 8672ರ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ 3 ಜನ ಆರೋಪಿಗಳು 2 ಹೋರಿಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಕಟಾವು ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದವರ ಮೇಲೆ ದಾಳಿ ಮಾಡಿದ್ದು 2 ಮತ್ತು 3ನೇ ಆರೋಪಿಗಳು ಓಡಿಹೋಗಿದ್ದು ಎ1 ಆರೋಪಿ ಅಭೀಷೇಕ್ ಬಿನ್ ಏಸುಸ್ವಾಮಿಯನ್ನು ಹಾಗೂ ವಾಹನವನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದಿದ್ದಾರೆ.
ಇನ್ನಿಬ್ಬರುಗಳು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.