ರಿಪ್ಪನ್‌ಪೇಟೆ: ಶಿವಮೊಗ್ಗದ ಸ್ಯಾಂಡಲ್ ಕಾಲೋನಿ ಬಳಿ ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ ಕೆ.ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿಯನ್ನಾದರಿಸಿ ಆಯನೂರು ಕೋಟೆ ನಿವಾಸಿ ಸದ್ಯ ಭದ್ರಾವತಿ ಸಿರಿಯೂರು ಕ್ಯಾಂಪ್‌ನ ನಿವಾಸಿ ಕೂಲಿ ಕಾರ್ಮಿಕ ಸಂಜಯ್ ಕುಮಾರ್ (40) ಎಂಬ ಅರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಎಸ್ಐ ವಿನಾಯಕ ಕೆ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಿರೀಶ್, ಮಹೇಶ್ ಇನ್ನಿತರ ಸಿಬ್ಬಂದಿ ವರ್ಗದವರು ಈ ಪತ್ತೆ ಕಾರ್ಯದಲ್ಲಿದ್ದರು.