ರಿಪ್ಪನ್‌ಪೇಟೆ: ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯಿತು ತಂತ್ರಜ್ಞಾನ ಬೆಳೆದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತುರ್ತು ವ್ಯವಹಾರ ನಡೆಸಲು ಅರ್ಥಿಕ ಸಾಲಸೌಲಭ್ಯ ಯೋಜನೆಯನ್ನು ಅನುಷ್ಟಾನಗೊಳಿಸಿರುತ್ತದೆ ಎಂದು ಮುತ್ತೂಟ್‌ನ ಸಾಗರ-ಶಿವಮೊಗ್ಗ ವಲಯಾಧಿಕಾರಿ ಚಂದ್ರಶೇಖರ್ ಹೇಳಿದರು.
ರಿಪ್ಪನ್‌ಪೇಟೆಯ ಮುತ್ತೂಟ್ ಶಾಖಾ ಕಛೇರಿಯಲ್ಲಿ ಇಂದು “ವ್ಯಾಪಾರ ಸಾಲ ಯೋಜನೆ’’ಗೆ ಚಾಲನೆ ನೀಡಿ ಮಾತನಾಡಿ, ಮೂತ್ತೂಟ್ ಫಿನ್‌ಕಾರ್ಪ್ನಿಂದ ಬಂಗಾರದ ಸಾಲ,ಚೀಟ್‌ಫಂಡ್, ದ್ವಿಚಕ್ರ ವಾಹನ ಸಾಲ, ಹಣ ವರ್ಗಾವಣೆ, ಸ್ವರ್ಣವರ್ಪಂ, ಆರೋಗ್ಯ ಕಾರ್ಡ್ ವಾಹನಗಳ ವಿಮಾ ಸೌಲಭ್ಯ,ಜೀವ ವಿಮಾ ಪಾಲಸಿ, ಪಾನ್‌ಕಾರ್ಡ್ ಹೀಗೆ ಹಲವು ಗ್ರಾಹಕರಿಗೆ ಅನುಕೂಲವಾಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಮೂತ್ತೂಟ್ ಬ್ಯುಸಿನೆಸ್ ಸಾಲ ಯೋಜನೆಗೆ ಟೈಲರ್ ಕೇಶವ ಉದ್ಘಾಟಿಸಿದರು.ಕಗ್ಗಲಿ ಗಿರೀಶ್ (ಶಿವರಾಜ್‌ಪಾಟೀಲ್) ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಖಾ ವ್ಯವಸ್ಥಾಪಕಿ ಎಲ್.ಎಸ್.ಮಿಲನ್‌ಲಕ್ಕವಳ್ಳಿ, ಸಿಬ್ಬಂದಿಗಳಾದ ಪ್ರವೇಶ, ಕಿರಣ್, ವಸಂತ್, ಮಹೇಂದ್ರಗೌಡ ಕಳಸೆ, ಹರೀಶ್ ಬೆಳಂದೂರು, ಪ್ರತ್ಯಕ್ಷ ಕುಕ್ಕಳಲೆ, ಮಲ್ಲೇಶ್ ಆಲವಳ್ಳಿ, ದೇವು ಅಚಾರ್, ಸಂತೋಷ ಬಿಲ್ಲೇಶ್ವರ ಇನ್ನಿತರ ಗ್ರಾಹಕರು ಹಾಜರಿದ್ದರು.
ಕಛೇರಿ ವ್ಯವಸ್ಥಾಪಕಿ ಎಲ್.ಎಸ್.ಮಿಲನ್ ಲಕ್ಕವಳ್ಳಿ ಸ್ವಾಗತಿಸಿದರು. ಪ್ರವೇಶ ನಿರೂಪಿಸಿದರು. ಕಿರಣ ವಂದಿಸಿದರು.
.