ಹೊಸನಗರ ; ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ

0 106


ಹೊಸನಗರ: ಆಗಸ್ಟ್ 15ರಂದು ಪಟ್ಟಣದ ನೆಹರು ಮೈದಾನದಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಿಸುವುದಾಗಿ ತಹಶೀಲ್ದಾರ್ ಧರ್ಮಾಂತ ಗಂಗಾಧರ್ ಕೋರಿಯವರು ತಿಳಿಸಿದರು.

ಕಂದಾಯ ಇಲಾಖೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನಲ್ಲಿ 19 ಸರ್ಕಾರಿ ಕಛೇರಿಗಳಿದ್ದು ಅವುಗಳನ್ನು ಒಟ್ಟು ಮಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಈ ಸಭೆಯಲ್ಲಿ ತೀರ್ಮಾನಿಸಿದ್ದು ಸ್ವಾತಂತ್ರ್ಯ ದಿನಾಚರಣೆಗೆ ಬರುವ ವೆಚ್ಚಗಳನ್ನು ಎಲ್ಲ ಸರ್ಕಾರಿ ಅಧಿಕಾರಿಗಳು ಸಮನಾಗಿ ವಿಭಾಗಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.


ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ನಾವುಗಳು ಸಿದ್ದವಿದ್ದು ಬೆಳಿಗ್ಗೆ 8ಗಂಟೆಯ ಒಳಗೆ ಎಲ್ಲ ಸರ್ಕಾರಿ ಕಛೇರಿಯಲ್ಲಿ ಧ್ವಜಾರೋಹಣ ಮುಗಿಸಿ 9ಗಂಟೆಗೆ ಪಟ್ಟಣದ ನೆಹರು ಮೈದಾನಕ್ಕೆ ಅಧಿಕಾರಿಗಳು ಆಗಮಿಸಬೇಕು ಹೊಸನಗರ ಪಟ್ಟಣ ವ್ಯಾಪ್ತಿಯ ಶಾಲೆಗಳ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಧ್ವಜಾರೋಹಣ ಮುಗಿಸಿ ನೆಹರು ಮೈದಾನಕ್ಕೆ ಕರೆದುಕೊಂಡು ಬರಬೇಕು. ವಿದ್ಯಾರ್ಥಿಗಳ ಜವಾಬ್ದಾರಿ ಶಿಕ್ಷಕ ವರ್ಗದವರಾಗಿರುತ್ತದೆ ಎಂದರು.


ಲಘು ಉಪಾಹಾರದ ವ್ಯವಸ್ಥೆ ಮಾಡಿ:

ವಿದ್ಯಾರ್ಥಿಗಳು ಆಯಾಯ ಶಾಲೆಗಳಿಂದ ಆಗಮಿಸಿ ನೆಹರು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ ಬಂದವರಿಗೆ 11 ಗಂಟೆಯವರೆಗೆ ಇರಲು ಕಷ್ಟಕರವಾಗುತ್ತದೆಲ ಆದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲು ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸಹಕರಿಸಬೇಕೆಂದು ಕೇಳಿಕೊಂಡರು.


5 ಸರ್ಕಲ್‌ಗಳಿಗೆ ವಿದ್ಯುತ್ ಅಲಂಕಾರ ವ್ಯವಸ್ಥೆ: ಹೊಸನಗರ ಪಟ್ಟಣದಲ್ಲಿ 5 ಸರ್ಕಲ್‌ಗಳಿದ್ದು 5ಸರ್ಕಲ್‌ಗಳಿಗೆ ಆಗಸ್ಟ್ 14ರ ರಾತ್ರಿಯಿಂದ ವಿದ್ಯುತ್ ಅಲಂಕಾರ ಮಾಡಬೇಕೆಂದು ಮೆಸ್ಕಾಂ ಇಲಾಖೆಯ ಇಂಜಿನಿಯರ್ ಚಂದ್ರಶೇಖರ್‌ರವರಿಗೆ ಸೂಚಿಸಿದರು.


ಈ ಪೂರ್ವಭಾವಿ ಸಭೆಯಲ್ಲಿ ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬಿಸಿಎಂ ಹಾಸ್ಟೆಲ್ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಪಿಡಬ್ಲ್ಯೂಡಿ ಇಂಜಿನಿಯರ್‌ಗಳು, ಯೋಗೇಂದ್ರ, ಸಬ್ ರಿಜಿಸ್ಟರ್ ಕಛೇರಿಯ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರೇಡ್2 ತಹಶೀಲ್ದಾರ್ ರಾಕೇಶ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ವಿನಯ್ ಎಂ ಆರಾಧ್ಯ, ಶಿಕ್ಷಣ ಇಲಾಖೆಯ ಬಾಲಚಂದ್ರ, ಆರೋಗ್ಯ ಇಲಾಖೆಯ ಬಾಲಚಂದ್ರ, ಅಬಕಾರಿ ಇಲಾಖೆಯ ಅಧಿಕಾರಿಗಳು ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!