ತಾಯಂದಿರಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ರಕ್ತಹೀನತೆ ; ಆರಗ ಜ್ಞಾನೇಂದ್ರ

0 405

ರಿಪ್ಪನ್‌ಪೇಟೆ: ಗರ್ಭಿಣಿಯರಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯು ಕುಂಠಿತಗೊಳ್ಳುವುದರೊಂದಿಗೆ ಅನಾರೋಗ್ಯದ ಮಗು ಜನಿಸುತ್ತದೆಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.

ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಣೆಬಸ್ತಿಯ ಅಂಗವಾಡಿ ಕೇಂದ್ರದಲ್ಲಿ “ಬಾಲಮೇಳ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿಯ ಮೂಲಕ ಗರ್ಭಿಣಿಯರಿಗೆ ಹಲವು ಯೋಜನೆಗಳ ಮೂಲಕ ಪೌಷ್ಟಿಕಾಂಶದಂತಹ ಆಹಾರವನ್ನು ನೀಡುತ್ತಿದ್ದು ಹಸಿರುಸೊಪ್ಪು ಮತ್ತು ಹಸಿ ತರಕಾರಿಗಳನ್ನು ಪೌಷ್ಟಿಕಾಂಶದ ಹಣ್ಣುಗಳು ಮತ್ತು ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ತಾಯಿ ಮಗು ಸದೃಡರಾಗುವುದರೊಂದಿಗೆ ರಕ್ತ ಹೀನತೆಯಿಂದ ಮುಕ್ತರಾಗಲು ಸಾಧ್ಯವಾಗುವುದೆಂದರು.

ಅಮೃತ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಶ್ವ ಗಂದ್ರಳ್ಳಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶೃತಿ, ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿನಂತಿ, ಅಮೃತ ಗ್ರಾಮ ಪಂಚಾಯ್ತಿ ಸದಸ್ಯ ಹೊಳೆಕೇವಿ ದೇವರಾಜ, ಇನ್ನಿತರ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಬಾಲವಿಕಾಸ ಸಮಿತಿಯ ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!