ಇನ್ನೆರಡು ವರ್ಷಗಳಲ್ಲಿ ಹೊಸನಗರ‌ವನ್ನು ಸ್ವಚ್ಛ, ಸುಂದರ ಪಟ್ಟಣವನ್ನಾಗಿ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆಯಲಿ ; ಡಿ.ಜಿ ಕೋರೆ

0 55


ಹೊಸನಗರ: ಪಟ್ಟಣ ಎರಡು ವರ್ಷಗಳಲ್ಲಿ ಸುಂದರ ನಗರ ಸ್ವಚ್ಛ ಪಟ್ಟಣವನ್ನಾಗಿ ಮಾರ್ಪಾಡು ಮಾಡಿ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯಲಿ ಎಂದು ಹೊಸನಗರ ತಹಶೀಲ್ದಾರ್ ಡಿ.ಜಿ ಕೋರೆಯವರು ಹೇಳಿದರು.

ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಹಾಗೂ ಸೀಮ್ಯಾಖ್ ಬೆಂಗಳೂರು ರವರ ಸಹಾಯದೊಂದಿಗೆ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ, ಪೌರಕಾರ್ಮಿಕರಿಗೆ, ಸ್ವಸಹಾಯ ಸಂಘಗಳಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೊಸನಗರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರ ಇದ್ದಲ್ಲಿ ಮಾತ್ರ ಅನುಷ್ಟಾನಕ್ಕೆ ತರಬಹುದಾಗಿದೆ ಎಂದು ತಿಳಿಸಿದರು.

ಪ.ಪಂ ಸದಸ್ಯ ಅಶ್ವಿನಿ ಕುಮಾರ್ ಕೆ.ಕೆ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಯಲ್ಲಿ ಶಾಲಾ ಮಕ್ಕಳ ಪಾತ್ರ ಪ್ರಮುಖವಾಗಿದ್ದು, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಯನ್ನು ಬಳಸಲು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜು ಹಾಗೂ ಅವರ ಸಿಬ್ಬಂದಿಗಳು, ಸೀಮ್ಯಾಕ್‌ನ ಸಂಯೋಜಕರಾದ ಹರೀಶ್ ಎಂ ಹಾಗೂ ವ್ಯವಸ್ಥಾಪಕರು ವಿಜಯಲಕ್ಷ್ಮಿ ರವರು ಮತ್ತು ಒಂದು ಭೂಮಿ ಫೌಂಡೇಶನ್ ನವನೀತ್ ರವರು ಹಾಗೂ ಬಾಲಸುಬ್ರಹ್ಮಣ್ಯ ರವರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಸರ ಭದ್ರಾವತಿ ನಗರ ಸಭೆ ಪ್ರಭಾಕರ್, ಸಾಗರ ನಗರ ಸಭೆ ಮದನ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿಯಲ್ಲಿದ್ದರು.


ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಿರಿಯ ಆರೋಗ್ಯ ನಿರೀಕ್ಷ ರಮೇಶ್ ಶಿಕಾರಿಪುರ, ಸೊರಬ, ಶಿರಾಳಕೊಪ್ಪ, ಜೋಗ-ಕಾರ್ಗಲ್ ಅಧಿಕಾರಿಗಳ ವರ್ಗ, ಪ.ಪಂ. ಸದಸ್ಯರಾದ ಕೃಷ್ಣವೇಣಿ ಬಿ ರವರು, ಗಾಯಿತ್ರಿ ನಾಗರಾಜ್, ಶಾಯಿನಾ, ಗುಲಾಬಿ ಮರಿಯಪ್ಪ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು ಮತ್ತು ಪಟ್ಟಣ ಪಂಚಾಯಿತಿ ಸರ್ವ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.

Leave A Reply

Your email address will not be published.

error: Content is protected !!