ಧರ್ಮದ ಹೆಸರಿನಲ್ಲಿ ಮತ ಗಳಿಸುವ ಬಿಜೆಪಿಯ ಹುನ್ನಾರ ಈ ಬಾರಿ ನಡೆಯದು ; ಕಿಮ್ಮನೆ ರತ್ನಾಕರ್

0 163

ಶಿವಮೊಗ್ಗ : ಧರ್ಮದ ವಿಷಯಗಳನ್ನು ಮುನ್ನಡೆಗೆ ತಂದು ಬಹುಸಂಖ್ಯಾತರ ಮತ ಗಳಿಸುವ ಬಿಜೆಪಿಯ ಹುನ್ನಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖಂಡರು ಜಾತಿ, ಧರ್ಮ ಮತ್ತು ಅಲ್ಪಸಂಖ್ಯಾತರ ಧರ್ಮದ ವಿಷಯಗಳನ್ನೇ ಕೆದುಕುತ್ತ ಈ ದೇಶದ ಜನರ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ, ಬಡವರ ವಿರುದ್ಧವಾಗಿ ನಿಲ್ಲುತ್ತಿದ್ದಾರೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.

ಕೇಂದ್ರ ಸರ್ಕಾರ ತನ್ನ ಆರ್ಥಿಕ ನೀತಿಯನ್ನೇ ಬದಲಾಯಿಸಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ಬರಬೇಕಾದ 1 ಲಕ್ಷ 87 ಸಾವಿರ ಕೋಟಿ ರೂ.ಗಳನ್ನು ನೀಡದೇ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಸುಪ್ರೀಂಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕಾದ ಸ್ಥಿತಿ ಬಂದೊದಗಿದೆ ಎಂದರು.

ಕೇಂದ್ರ ಸರ್ಕಾರ ನೆರೆಗೂ ಹಣ ನೀಡಲಿಲ್ಲ, ಬರಕ್ಕೂ ಹಣ ನೀಡಲಿಲ್ಲ. ರಾಜ್ಯದ ಬಿಜೆಪಿಯ 27 ಸಂಸದರು ಕೂಡ ತುಟಿಕ್ ಪಿಟಿಕ್ ಎನ್ನಲಿಲ್ಲ. ಈಗ ಬರಗಾಲ ತಂಡವಾಡುತ್ತಿದೆ. ಪ್ರಾಣಿ-ಪಕ್ಷಿ ಜನರಿಗೂ ನೀಡಿಲ್ಲ. ಇಂತಹ ಸಂದರ್ಭದಲ್ಲೂ ಆದರೂ ನೆರವು ನೀಡಬಹುದಿತ್ತು ಆದರೂ ಕೊಡಲಿಲ್ಲ. ರಾಜ್ಯ ಸರ್ಕಾರ ಹಣ ಕೊಡುತ್ತೇವೆ. ಅಕ್ಕಿ ಕೊಡಿ ಎಂದು ಕೇಳಿದರು. ಇಲ್ಲ ಎಂದರು. ಆದರೆ 29 ರೂ.1 ಕೆ.ಜಿ.ಯಂತೆ ಅವರೇ ಅಕ್ಕಿಯನ್ನು ಮಾರುತ್ತಿದ್ದಾರೆ ಎಂದರು.

ಕೇಂದ್ರದ ರಾಜಕೀಯ ಮುಖಂಡರದ್ದು ಕಲ್ಲು ಹೃದಯವಾಗಿದೆ. ಈಗ ಚುನಾವಣೆಗೆ ಬಂದಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆ ಏಕತೆಗೆ, ಸಮಗ್ರತೆಗೆ ಕಂಟಕವಾಗಿರುವ ಇವರಿಗೆ ಮತ ಕೇಳುವ ನೈತಿಕ ಹಕ್ಕು ಎಲ್ಲಿದೆ? ಎಂದು ಪ್ರಶ್ನೆ ಮಾಡಿದರು.

ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಇವರು ವಿರೋಧಿಸುತ್ತಿದ್ದಾರೆ. ಗ್ಯಾರಂಟಿ ಬೇಡ ಎನ್ನುವವರು ನಮಗೆ ಗ್ಯಾರಂಟಿಗಳು ಬೇಡ ಎಂದು ಸರ್ಕಾರಕ್ಕೆ ವಾಪಾಸು ಕೊಡಲಿ, ಅದು ಕೊನೆ ಪಕ್ಷ ಬಡವರಿಗಾದರು ತಲುಪಲಿ. ಮೊದ ಮೊದಲು ಕೆಲ ಬಿಜೆಪಿ ನಾಯಕರು ಗ್ಯಾರಂಟಿಗಳು ಯಾರಿಗೂ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಪಟ್ಟಿ ನೀಡಲಿ. ನಾವು ಅವರಿಗೆ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದರು.

ಗಾಂಧಿ ಕೊಂದವನಿಗೆ ನೈವೈದ್ಯ ಸಲ್ಲಿಸುವ ಬಿಜೆಪಿಗರಿಗೆ ಜಾತ್ಯತೀತ ಎಂಬ ಪದದ ಅರ್ಥವೇ ಗೊತ್ತಿಲ್ಲ. ಆದ್ವಾನಿಯವರು ಈ ಪದವನ್ನೇ ವಿರೋಧಿಸಿದವರು. ಗಾಂಧಿ ಕೊಂದ ಗೂಡ್ಸೆ ಮನೆಯೇ ಹಿಂದು ಮಹಾಸಭಾದ ಕೇಂದ್ರವಾಗಿತ್ತು. ಗಾಂಧಿಯನ್ನು ಕೊಂದ ಕೇಸಿನಲ್ಲಿ ಸಾವರ‍್ಕರ್ ಕ್ರೂರ ಆರೋಪಿಯಾಗಿದ್ದ ಎಂಬುವುದನ್ನು ಇವರು ಮರೆತಿದ್ದಾರೆ ಎಂದರು.

ಅಂಬೇಡ್ಕರ್‌ರವರನ್ನು ಓದದೇ ಇತಿಹಾಸವನ್ನು ಅರಿಯದೇ, ಅಧ್ಯಾಯನ ಮಾಡದೇ ಕೆಲ ಬಿಜೆಪಿ ಮುಖಂಡರು ಕೂಗು ಮಾರಿಗಳಾಗಿದ್ದಾರೆ. ಅಂಬೇಡ್ಕರ್‌ರವರನ್ನು ಕಾಂಗ್ರೆಸ್ಸಿಗರು ಸೋಲಿಸಿದ್ದರು ಎಂದು ಹೇಳುತ್ತಾರೆ. ಆದರೆ ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿ ಮಂತ್ರಿ ಮಾಡಿದ್ದನ್ನು ಇವರು ಮರೆತಿದ್ದಾರೆ. ಮೋದಿಯವರು ತುಂಬ ಸರಳ ಎಂದು ಬೊಗಳೆ ಬಿಡುತ್ತಾರೆ. ದಿನಕ್ಕೆ 5 ಡ್ರಸ್ಸ್ಗಳನ್ನು ಬದಲಾವಣೆ ಮಾಡುವ ಮೋದಿಯವರಿಗೆ ಬಡವರ ಸರಳತೆ ಹೇಗೆ ಅರ್ಥವಾಗುತ್ತದೆ. ಒಂದೊಂದು ಬಟ್ಟೆಗೂ 10 ಲಕ್ಷ ಇದೆ. ಅವರು ಸಹಿ ಮಾಡುವ
ಪೆನ್ನಿನ ಬೆಲೆಯೇ 2 ಲಕ್ಷ ರೂ.ವಾಗಿದೆ. ಈ ದೇಶದ ಜನರಿಗೆ ಬಟ್ಟೆ ಇಲ್ಲ ಎಂದು ಗಾಂಧೀಜಿಯವರು ಬರಿ ಮೈಯಲ್ಲಿದ್ದರು. ಈ ಮೋದಿ ಲಕ್ಷಾಂತರ ರೂ. ಬೆಲೆ ಬಾಳುವ ಬಟ್ಟೆಗಳನ್ನು ತೊಡುತ್ತಾರೆ. ಮೋದಿ ಎಲ್ಲಿ…? ಗಾಂಧಿ ಎಲ್ಲಿ…? ಹೇಗೆ ವಿಶ್ವನಾಯಕ ಆಗುತ್ತಾರೆ ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರದ ಅನಾಹುತಗಳು ಧರ್ಮದ ದುರುಪಯೋಗ ಈ ಬಾರಿ ಬಿಜೆಪಿಯ ಸೋಲಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತದೆ. ಮೋದಿಯವರ ಈಡೇರದ ಭರವಸೆಗಳು ಮತ್ತು ದಲಿತರಿಗೆ ಅಲ್ಪಸಂಖ್ಯಾತರಿಗೆ ಭಯದ ವಾತಾವರಣವಿದ್ದು, ಇದನ್ನು ತಪ್ಪಿಸಲು ಕಾಂಗ್ರೆಸ್‌ನ್ನು ಗೆಲ್ಲಿಸಬೇಕಾಗಿದೆ. ಗೀತಾ ಶಿವರಾಜ್‌ಕುಮಾರ್ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್.ಟಿ. ಚಂದ್ರ ಶೇಖರ್, ಯು. ಶಿವಾನಂದ್, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಮಧು, ಜಿತೇಂದ್ರ ಇದ್ದರು.

Leave A Reply

Your email address will not be published.

error: Content is protected !!