ಮಹಿಳೆ ಗರ್ಭಾಶಯದಿಂದ 9 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು !

0 501

ಶಿವಮೊಗ್ಗ : ಇಲ್ಲಿನ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ 9 ಕೆ.ಜಿ ತೂಕದ ಗೆಡ್ಡೆ ಹೊರ ತೆಗೆಯಲಾಗಿದೆ.

ಕಡೂರು ತಾಲ್ಲೂಕಿನ 49 ವರ್ಷದ ಮಹಿಳೆಯ ಗರ್ಭಾಶಯದಲ್ಲಿ ಇದ್ದ 9 ಕೆ.ಜಿ ಬೃಹತ್ ಗಾತ್ರದ ಗಡ್ಡೆಯನ್ನು ಏಪ್ರಿಲ್ 6 ರಂದು ವೈದ್ಯರು ಹೊರತೆಗೆದರು.

ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ದೀಪಕ್ ಎಚ್.ಎಲ್ , ಡಾ.ಸಂದೇಶ್ ಕೆ.ಆರ್ (ಶಸ್ತ್ರ ಚಿಕಿತ್ಸಾ ತಜ್ಞರು) ಹಾಗೂ ಡಾ.ವಾದಿರಾಜ್ ಕುಲಕರ್ಣಿ, ಅರವಳಿಕೆ ತಜ್ಞ ಡಾ.ಅರ್ಜುನ್ ಭಾಗವತ್ ಹಾಗೂ ಸಿಬ್ಬಂದಿ ಚಿಕಿತ್ಸಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!