ನ. 26 ರಂದು ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ | ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ

0 492

ಶಿವಮೊಗ್ಗ : ಧೀರ ದೀವರ ಬಳಗ ಮತ್ತು ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಶಿವಮೊಗ್ಗ (Shivamogga) ಇವರ ವತಿಯಿಂದ ನ. 26 ರಂದು ನಗರದ ಈಡಿಗರ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ ತಿಳಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸಮಾರಂಭವನ್ನು ಅಂದು ಬೆಳಗ್ಗೆ 10 ಗಂಟೆಗೆ ಸಾರಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವದೂತರು ಉದ್ಘಾಟಿಸುವರು. ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಆಗಮಿಸುವರು. ಸಂಚಾಲಕ ನಾಗರಾಜ ನೇರಿಗೆ ಉಪಸ್ಥಿತರಿರುವರು ಎಂದರು.

ಮಧ್ಯಾಹ್ನ 3 ಗಂಟೆಗೆ ಧೀರ ದೀವರು ಪುರಸ್ಕಾರವನ್ನು ಸಿಗಂದೂರಿನ ಧರ್ಮದರ್ಶಿ ಎಸ್. ರಾಮಪ್ಪ ಮತ್ತು ಜಾನಪದ ಕಲಾವಿದ ಟಾಕಪ್ಪ ಕಣ್ಣೂರು, ಲಕ್ಷ್ಮಮ್ಮ ಗಡೆಮನೆ ಅವರಿಗೆ ಪ್ರದಾನ ಮಾಡಲಾಗುವುದು. ಸಿರಿವಂತೆ ಚಂದ್ರಶೇಖರ್ ಸಮಾರೋಪ ಭಾಷಣ ಮಾಡುವರು.

ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿಕೊಡುವರು. ಅತಿಥಿಗಳಾಗಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ, ಗೃಹಸಚಿವರ ಆಪ್ತ ಕಾರ್ಯ ದರ್ಶಿ ಕೆ. ಚನ್ನಬಸಪ, ನಗರಾಭಿವೃದ್ಧಿ ಇಲಾ ಖೆಯ ಉಪಕಾರ್ಯದರ್ಶಿ ಎಚ್. ಕೆ. ಕೃಷ್ಣಮೂ ರ್ತಿ, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಬ್ರಹ್ಮಶ್ರೀ ನಾರಾಯಣ ಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಡಾ|| ಜಿ.ಡಿ ನಾರಾಯಣಪ್ಪ, ಡಾ|| ರಾಜನಂದಿನಿ ಕಾಗೋಡು, ಮಹಿಳಾ ಈಡಿಗ ಸಂಘದ ಜಿಲ್ಲಾಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಆಗಮಿಸುವರು. ಸಂಚಾಲಕ ನಾಗರಾಜ ನೇರಿಗೆ ಅಧ್ಯಕ್ಷತೆ ವಹಿಸುವರು. ಇನ್ನೊಬ್ಬ ಸಂಚಾಲಕ ಸುರೇಶ್ ಬಾಳೆಗುಂಡಿ, ಹಳೆಪೈಕ ದೀವರ ಸಂಸ್ಕೃತಿ ಬಳಗದ ಅರವಿಂದ ಕರ್ಕಿಕೋಡಿ ಹೊನ್ನಾವರ ಉಪಸ್ಥಿತರಿರುವರು ಎಂದು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಈಡಿಗ ಸಮಾಜದ ಮುಖಂಡರಾದ ಲಕ್ಷ್ಮೀಕಾಂತ ಚಿಮಣೂರು, ಪುನೀತ್, ಕೃಷ್ಣಮೂರ್ತಿ, ಜಯದೇವಪ್ಪ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!