ಗ್ರಾಮ-ಗ್ರಾಮಗಳಲ್ಲಿ ರುದ್ರಭೂಮಿ ಇರುವುದು ಅತ್ಯಗತ್ಯ : ಬೇಬಿ ಕೆ

0 170

ಹೊಸನಗರ: ಊರೆಂದ ಮೇಲೆ ಸಾವು-ನೋವುಗಳು ಸಹಜ. ಸಾವಿಲ್ಲದ ಮನೆಯಿಲ್ಲ ಆದರೆ ಊರಿನಲ್ಲಿ ಗ್ರಾಮ-ಗ್ರಾಮಗಳಲ್ಲಿ ಒಂದು ರುದ್ರಭೂಮಿ ಇರಬೇಕೆಂದು ಹೊಸನಗರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಯಾದ ಬೇಬಿ ಕೆ ಹೇಳಿದರು.

ತಾಲ್ಲೂಕಿನ ಮಾಸ್ತಿಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿಂದುರುದ್ರ ಭೂಮಿಗೆ ಧರ್ಮಸ್ಥಳ ಪೂಜ್ಯರಿಂದ 1.50ಲಕ್ಷ ರೂಪಾಯಿ ಮಂಜೂರಾತಿಯಾಗಿದ್ದು ಸಿಲಿಕಾನ್ ಚೇಂಬರ್ ವಿತರಿಸಿ ಮಾತನಾಡಿದರು.

ಸರ್ಕಾರಗಳು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರುದ್ರ ಭೂಮಿಗಾಗಿ ಒಂದೂವರೆಯಿಂದ ಎರಡು ಎಕರೆ ಜಮೀನು ಮಂಜೂರಾತಿ ಮಾಡಿದ್ದು ಸರಿಯಷ್ಟೆ ಆದರೆ ರುದ್ರಭೂಮಿಗೆ ಬೇಕಾಗುವ ಸಾಮಾಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿದ್ದು ನಮ್ಮ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ಸಾಕಷ್ಟು ಸಾಮಾಗ್ರಿಗಳನ್ನು ಇಲ್ಲಿಯವರೆಗೆ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ. ಕೃಷ್ಣಮೂರ್ತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಒಕ್ಕೂಟದ ಅಧ್ಯಕ್ಷ ಸಂಜು ಭಂಡಾರಿ, ವಲಯ ಮೇಲ್ವಿಚಾರಕ ಮಧುಕೇಶ ಹಾಗೂ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!