ಪ್ರತಿಯೊಬ್ಬರು ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ

0 39

ರಿಪ್ಪನ್‌ಪೇಟೆ: 25 ರಿಂದ 30 ವರ್ಷ ಮೇಲ್ಪಡುವ ಪ್ರತಿಯೊಬ್ಬರು ಪ್ರತಿ ಆರು ತಿಂಗಳು ಅಥವಾ ಒಂದು ವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯದಲ್ಲಿನ ವ್ಯತ್ಯಾಸವನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ಆರಂಭದಲ್ಲಿಯೇ ರೋಗವನ್ನು ಗುಣಪಡಿಸಿಕೊಳ್ಳಲು ಸಾಧ್ಯವೆಂದು ಶಿವಮೊಗ್ಗ ಆರೈಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಫಿಜಿಶಿಯನ್ ಡಾ.ಆಶಿತಾ ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಅವರಣಧಲ್ಲಿ ಶಿವಮೊಗ್ಗ ಆರೈಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಗ್ರಾಮ ಪಂಚಾಯ್ತಿ ರಿಪ್ಪನ್‌ಪೇಟೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಣ ಹೆಲ್ತ್‌ಕೇರ್ (ಡಾ.ಕಿರಣ್‌ಶಾಸ್ತ್ರಿ ಎಂ.ಬಿ.ಬಿ.ಎಸ್) ಇವರ ಮೊದಲನೇ ವರ್ಷದ ಅಂಗವಾಗಿ ಆಯೋಜಿಸಲಾದ “ಉಚಿತ ಆರೋಗ್ಯ ತಪಾಸಣಾ ಶಿಬಿರ’’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಲ್ಲಿ ಕಾಣುವ ಹಲವು ಸ್ತ್ರೀ ಸಮಸ್ಯೆಗಳ ಕುರಿತು ಜಾಗೃತಿ ವಹಿಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದರು.

ಇನ್ನೋರ್ವ ಸ್ತ್ರೀ ರೋಗ ತಜ್ಞರಾದ ಡಾ.ಲಕ್ಷ್ಮಿ ಮಾತನಾಡಿ, ಇಂದಿನ ದುಬಾರಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ರೈತ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಚಿಕಿತ್ಸೆ ಪಡೆಯಲು ದೊಡ್ಡ ನಗರಗಳಲ್ಲಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಕಷ್ಟಕರವಾಗಿರುವಾಗ ಗ್ರಾಮೀಣ ಭಾಗದಲ್ಲಿನ ತಮ್ಮೂರಿನಲ್ಲಿಯೇ ಇಂತಹ ಉಚಿತ ಶಿಬಿರಗಳನ್ನು ಏರ್ಪಡಿಸಿ ರೋಗದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶವಾಗುವುದೆಂದು ಹೇಳಿದರು.

ಈ ಶಿಬಿರದಲ್ಲಿ ತಜ್ಞ ವೈದ್ಯಾಧಿಕಾರಿಗಳಾದ ಚರ್ಮರೋಗ ತಜ್ಞ ಡಾ.ಆಶಾ, ದಂತ ವೈದ್ಯರಾದ ಡಾ.ಅನಿತಾ, ಕೀಲು ಮತ್ತು ಮೋಳೆ ತಜ್ಞರಾದ ಡಾ.ವಿನಯ್, ಫ್ಯಾಮಿಲಿ ಫಿಜಿಶಿಯನ್ ಡಾ. ಕಿರಣ್‌ಶಾಸ್ತ್ರಿ ಹಾಗೂ ಡಾ.ಸುರೇಶ್ ಶಿಬಿರದಲ್ಲಿ ಪಾಲ್ಗೊಂಡು 400 ಕ್ಕೂ ಅಧಿಕ ಜನರಿಗೆ ತಪಾಸಣೆ ನಡೆಸಿದರು.

Leave A Reply

Your email address will not be published.

error: Content is protected !!